ಕುಶಾಲನಗರ, ನ. ೩೦: ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಅರ್ಲಿ ಚೈಲ್ಡ್ ಕೇರ್ ಅಂಡ್ ಎಜುಕೇಶನ್ ಸಂಸ್ಥೆ ವತಿಯಿಂದ ಪ್ರೀ ಸ್ಕೂಲ್ ಟೀಚರ್ಸ್ಗೆ ಉಚಿತ ತರಬೇತಿ ಶಿಬಿರ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಶಿಬಿರವನ್ನು ಕೆ.ಯು.ಎಸ್.ಎಂ.ಎ. ಸಂಘಟನೆಯ ಅಧ್ಯಕ್ಷ ಸತ್ಯಮೂರ್ತಿ ಉದ್ಘಾಟಿಸಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣಕ್ಕೆ ತಳಪಾಯವಾದ ಗುರುಕುಲ ಶಿಕ್ಷಣ ಪದ್ದತಿಯನ್ನು ಹಲವು ಪಾಶ್ಚಾತ್ಯ ದೇಶಗಳು ಅಳವಡಿಸಿಕೊಳ್ಳುತ್ತಿವೆ. ಮಕ್ಕಳನ್ನು ಗೊಂದಲದಿAದ ಮುಕ್ತಗೊಳಿಸುವ ಸಾಮರ್ಥ್ಯ ಶಿಕ್ಷಕರಿಗೆ ಇರಬೇಕು ಎಂದರು.

ಸAಘಟನೆಯ ರಾಜ್ಯ ಕಾರ್ಯದರ್ಶಿ ಆದಿಲ್ ಪಾಷ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ ಶಿಕ್ಷಕರು ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಶಿಕ್ಷಣ ಇಲಾಖೆ, ಶಾಲಾ ಆಡಳಿತ ಮಂಡಳಿ ಸೇರಿದಂತೆ ಯಾವುದೇ ರೀತಿಯ ಒತ್ತಡವಿದ್ದರೂ ಸಹ ಶಿಕ್ಷಕರು ಕಾಲಹರಣಕ್ಕೆ ಒತ್ತು ನೀಡದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ಸAಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ. ಕುಶ್ವಂತ್ ಕೋಳಿಬೈಲು, ಕಿರಣ್ ಶಂಕರ್, ಸಹನಾ ಪ್ರಸಾದ್, ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಶಾಲೆಯ ಮ್ಯಾನೆಜಿಂಗ್ ಟ್ರಸ್ಟಿ ಶಿವಪ್ರಕಾಶ್ ಶಿಕ್ಷಕರಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಿದರು.

ಈ ಸಂದರ್ಭ ಸಂಘಟನೆಯ ರಾಜ್ಯ ಘಟಕದ ಪ್ರಮುಖರಾದ ಎಸ್.ಎಲ್. ಭಟ್, ಬಸವರಾಜು, ದೀಪಕ್, ಶಂಕರ್, ಎನ್.ಐ.ಇ.ಸಿ.ಇ. ಸ್ಥಾಪಕ ಅಧ್ಯಕ್ಷ ಸಂಪತ್, ಕೊಡಗು ಜಿಲ್ಲಾ ಘಟಕ ಪ್ರಮುಖರಾದ ತಿಮ್ಮಯ್ಯ, ಪೂವಯ್ಯ, ಮತ್ತಿತರರು ಇದ್ದರು.