ಕೂಡಿಗೆ, ನ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ವರ ದೇವಾಲಯದ ಆವರಣದಲ್ಲಿ ಶ್ರೀ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ ಹಾಗೂ ಶ್ರೀ ಅಣ್ಣಪ್ಪ-ಪಂಜುರ್ಲಿ--ಕಲ್ಲುರ್ಟಿ ಹಾಗೂ ಚಾಮುಂಡಿ- ಗುಳಿಗ ದೈವಗಳ ನರ್ತನ ಸೇವೆ ಉಜಿರೆಯ ರಾಮಚಂದ್ರ ಭಟ್ ನೇತೃತ್ವದ ತಂಡದವರಿAದ ನೆರವೇರಿತು.
ಈ ಸಂದರ್ಭ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಭಕ್ತರು ಸೇರಿದಂತೆ ದೇವಾಲಯದ ಧರ್ಮದರ್ಶಿ ಎಲ್ಲೂಬಾಯಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.