ಶನಿವಾರಸಂತೆ, ನ. ೨೯: ಇಂದು ಕೆಲವೊಂದು ಆಶೆ-ಆಮಿಷಗಳ ಹಿಂದೆ ಬಿದ್ದು ಮನುಷ್ಯ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಇವನ್ನೆಲ್ಲಾ ದಾಟಿ, ಮನುಷ್ಯ ವಿಶ್ವದಲ್ಲಿ ಭರವಸೆ ಮೂಡಿಸಿ ವಿಶ್ವ ಮಾನವನಾಗಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎ.ಹೆಚ್. ಚಂದ್ರಕಾAತ್ ಹೇಳಿದರು. ಪಟ್ಟಣದ ಆರ್.ವಿ. ಕಲ್ಯಾಣ ಮಂಟಪದಲ್ಲಿ ನಡೆದ ರೋಟರಿ ಸಂಸ್ಥೆಯ ರೊಟೇರಿಯನ್ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ವಿಶ್ವಕ್ಕೆ ಶಾಂತಿ ಸಾರಿದ ದೇಶ ಭಾರತ. ಮನುಷ್ಯ ಸ್ವಾರ್ಥ ಮರೆತು ಧ್ಯೇಯಗಳೊಂದಿಗೆ ಸಮಾಜಮುಖಿ ಕೆಲಸ ಮಾಡಬೇಕು. ರೋಟರಿ ಕುಟುಂಬದ ಜತೆಗೆ ಹೊರಗಿನವರು ಬೆರೆತು ಸಮಾಜಸೇವೆ ಕಾರ್ಯಗಳಲ್ಲಿ ಜತೆಗೂಡಬೇಕು ಎಂದರು.

ಮುಖ್ಯ ಅತಿಥಿ ರೋಟರಿ ಜಿಲ್ಲಾ ರಾಜ್ಯಪಾಲ ಎಚ್.ಆರ್. ಕೇಶವ್ ಮಾತನಾಡಿ, ಶನಿವಾರಸಂತೆ ರೋಟರಿ ಸಂಸ್ಥೆ ೭ ವರ್ಷಗಳಲ್ಲಿ ಹಲವಾರು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮಾನವ-ಪ್ರಾಣಿ ಸಂಘರ್ಷದಲ್ಲಿ ಸಾವಿನ ಸುದ್ದಿ ಮಾತ್ರ ಪ್ರಾಮುಖ್ಯತೆ ಪಡೆಯುತ್ತದೆ. ಆದರೆ, ರೋಟರಿ ಸಂಸ್ಥೆ ಸಾಕು ನಾಯಿ-ಬೆಕ್ಕುಗಳಿಗೆ ಲಸಿಕೆ ಹಾಕಿಸುವುದು, ಸಾರ್ವಜನಿಕರಿಗೆ ಟಿಟಿ ಲಸಿಕೆ ಹಾಕಿಸುವುದು ಇತ್ಯಾದಿ ಮಾನವೀಯತೆ ಮೆರೆವ ಕಾರ್ಯಗಳನ್ನು ಮಾಡುತ್ತಿರುವುದು ಉತ್ತಮ ಸೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ರೊಟೇರಿಯನ್‌ಗಳ ಪತ್ನಿಯರನ್ನು ಸದಸ್ಯತ್ವ ನೀಡಿ ಸ್ವಾಗತಿಸಲಾಯಿತು.

ರೋಟರಿ ಜಿಲ್ಲಾ ಉಪ ರಾಜ್ಯಪಾಲ ಲಿಖಿತ್, ವಲಯ ಸೇನಾನಿ ಹೆಚ್.ಎಂ. ದಿವಾಕರ್ ಮಾತನಾಡಿದರು. ಕಾರ್ಯದರ್ಶಿ ಸೋಮಶೇಖರ್, ೨೦೨೪ ರ ಅವಧಿಯ ಅಧ್ಯಕ್ಷ ವರ್ಷಿತ್, ರೊಟೇರಿ ಯನ್‌ಗಳಾದ ನಾಗೇಶ್, ಪಿ.ಕೆ. ರವಿ, ವಸಂತ್, ಮಹೇಶ್, ಎಚ್.ವಿ. ದಿವಾಕರ್, ಎ.ಡಿ.ಮೋಹನ್ ಕುಮಾರ್, ಟಿ.ಆರ್. ಪುರುಷೋತ್ತಮ್, ಅರವಿಂದ್, ಮಧು, ಶುಭು, ಚಂದನ್, ವಸಂತ್ ಕುಮಾರ್, ಮೋಹನ್, ವಸಂತ್ ಅಮೃತ್, ಬಾಲು, ಪ್ರಕಾಶ್, ಉಮಾಶಂಕರ್ ಇತರರು ಹಾಜರಿದ್ದರು. ವಸಂತ ಕುಮಾರಿ ಪ್ರಾರ್ಥಿಸಿದರು. ಚಂದ್ರಕಾAತ್ ಸ್ವಾಗತಿಸಿ, ಸೋಮಶೇಖರ್ ವಂದಿಸಿದರು.