ಕೂಡಿಗೆ, ನ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗರಿ ಗ್ರಾಮದಲ್ಲಿರುವ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಸಿದ್ಧಗೊಂಡು ಈಗಾಗಲೇ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ರೂ. ೩ ಕೋಟಿ ೧೯ ಲಕ್ಷ ಬಿಡುಗಡೆಗೊಂಡು ವಿವಿಧ ಹಂತದ ಕಾಮಗಾರಿಗಳು ನಡೆಯುತ್ತಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಹಣವು ಹಂತ ಹಂತವಾಗಿ ಬಿಡುಗಡೆಗೊಂಡು ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನೂತನವಾಗಿ ಕಸ ವಿಲೇವಾರಿಗೆ ಸಂಬAಧಿಸಿದ ಶೆಡ್ ನಿರ್ಮಾಣ ಮತ್ತು ಒಣ ಕಸ ಮತ್ತು ಹಸಿ ಕಸಗಳ ಬೇರ್ಪಡಿಸುವ ನೂತನ ತಂತ್ರಜ್ಞಾನದ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಬೃಹತ್ ನಗರಗಳಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಅಳವಡಿಕೆ ಮಾಡಲಾಗಿರುವ ವಿವಿಧ ವಿನ್ಯಾಸ ಆಧುನಿಕ, ಅಂರ‍್ರಾಷ್ಟಿçÃಯ ತಂತ್ರಜ್ಞಾನದ ಯಂತ್ರಗಳ ಅಳವಡಿಸುವ ಯೋಜನೆಗೆ ಪೂರಕವಾಗಿ ವಿವಿಧ ಕಾಮಗಾರಿಗಳು ಭುವನಗಿರಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ನಡೆಯುತ್ತಿವೆ.

ಕುಶಾಲನಗರ ಪುರಸಭೆಯ ಮಾಸಿಕ ಸಭೆಯ ತೀರ್ಮಾನದಂತೆ ನೂತನ ಕಸ ವಿಲೇವಾರಿ ಯಂತ್ರಗಳ ಜೋಡಣೆ ಮತ್ತು ಒಣ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಾಟ ಮಾಡುವ ಮತ್ತು ಕಸದಿಂದ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ದೃಷ್ಟಿಯಿಂದ ಸರಕಾರದ ಹೊಸ ಯೋಜನೆಯ ಅನುಗುಣವಾಗಿ ಕಾಮಗಾರಿಗಳ ಕ್ರಿಯಾ ಯೋಜನೆ ಅನುಗುಣವಾಗಿ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಈಗಾಗಲೇ ಕೇಂದ್ರದಲ್ಲಿ ವಿವಿಧ ಹಂತದ ಕಾಮಗಾರಿಗಳ ಜೊತೆಯಲ್ಲಿ ಕಾರ್ಮಿಕರ ಕೊಠಡಿ, ಶೌಚಾಲಯ, ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಕಸ ವಿಲೇವಾರಿಗೆ ಸಂಬAಧಿಸಿದAತೆ ಶೆಡ್ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳು ಸಾಗುತ್ತಿವೆ. ನೂತನ ಕಸ ವಿಲೇವಾರಿ ಯಂತ್ರಗಳನ್ನು ಅಳವಡಿಸಲು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಆಧುನಿಕ, ಮಾದರಿಯ ಯಂತ್ರಗಳನ್ನು ಅಳವಡಿಸುವ ಕಾರ್ಯದೊಂದಿಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲು ಕಾರ್ಯೊನ್ಮುಖರಾಗಿರುವುದಾಗಿ ಕೃಷ್ಣ ಪ್ರಸಾದ್ ಮಾಹಿತಿ ನೀಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.