*ಸಿದ್ದಾಪುರ, ನ. ೨೯: ಸಂಪೂರ್ಣವಾಗಿ ಹದಗೆಟ್ಟಿದ್ದ ಕುಶಾಲನಗರ- ವಾಲ್ನೂರು ರಸ್ತೆ ಡಾಂಬ ರೀಕರಣ ಕಾರ್ಯ ಭರದಿಂದ ಸಾಗಿದೆ.
ಹೊಂಡ-ಗುAಡಿಗಳಾಗಿದ್ದ ವಾಲ್ನೂರು ರಸ್ತೆಯನ್ನು ಗ್ರಾಮಸ್ಥರೇ ಮಣ್ಣು ಹಾಕಿ ಮುಚ್ಚುವ ಪ್ರಯತ್ನ ಮಾಡಿದ್ದರು. ಹದಗೆಟ್ಟ ರಸ್ತೆಯಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಡಕುಂಟಾಗಿರುವ ಬಗ್ಗೆ “ಶಕ್ತಿ” ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಅಧಿಕಾರಿಗಳ ಮೂಲಕ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ. ಇದೀಗ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ. -ಅಂಚೆಮನೆ ಸುಧಿ