ಕೂಡಿಗೆ, ನ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯ ಆವರಣದಲ್ಲಿರುವ ಅಣ್ಣಪ್ಪ ಸ್ವಾಮಿ ದೇವರಿಗೆ ಬೆಳ್ಳಿ ಮುಖವಾಡವನ್ನು ಕುಶಾಲನಗರ ಉದ್ಯಮಿ ಬಿ. ಎಸ್.ಆರ್. ಗ್ರೂಪ್‌ನ ಮಾಲೀಕರಾದ ಜಗದೀಶ್, ದಂಪತಿಗಳು ಉದಾರವಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕುಶಾಲನಗರ ಪುರಸಭೆಯ ಸದಸ್ಯ ತಿಮ್ಮಪ್ಪ, ಇಂಜಿನಿಯರ್ ಕಿರಣ್ ಸೇರಿದಂತೆ ಕುಟುಂಬ ವರ್ಗದವರು ಹಾಜರಿದ್ದರು.