ಸುAಟಿಕೊಪ್ಪ, ನ.೨೯ : ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕು; ಕಳಪೆ ಕಾಮಗಾರಿ ನಡೆಸಿ ಕೈತೊಳೆದುಕೊಂಡರೆ ಮುಲಾ ಜಿಲ್ಲದೆ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಶಾಸಕ ಡಾ.ಮಂಥರ್‌ಗೌಡ ಹೇಳಿದರು. ಮಾದಾಪುರ ಗ್ರಾಮ ಪಂಚಾಯಿತಿಯ ಕುಂಬೂರು ಹಾಗೂ ಮಾದಾಪುರ ರಾಜ್ಯ ಹೆದ್ದಾರಿ ಬಳಿ ತಲಾ ೫೦ ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಾಮ ಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು; ಜನರ ಆಶೋತ್ತರ ಗಳನ್ನು ಹಂತ ಹಂತವಾಗಿ ನೆರವೇರಿಸ ಲಾಗುವುದೆಂದರು.

(ಮೊದಲ ಪುಟದಿಂದ) ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಜನರ ಸಮಸ್ಯೆ ಹೇಳತೀರದು, ವೈದ್ಯರ ನೇಮಕ ಮಾಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು. ಸ್ಥಳದಲ್ಲೇ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಶಾಸಕರು ಮೊಬೈಲ್‌ನಲ್ಲಿ ಮಾತನಾಡಿ ವೈದ್ಯರ ನೇಮಕ ಕೂಡಲೇ ಆಗಬೇಕೆಂದು ತಾಕೀತು ಮಾಡಿದರು. ಮಾದಾಪುರ ಗ್ರಾಮ ಪಂಚಾಯಿತಿಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನೇಮಕವಾಗದೆ ಸಮಸ್ಯೆಯಾಗಿದೆ ಎಂದು ಅಧ್ಯಕ್ಷ ಮನು ಬಿದ್ದಪ್ಪ ಹಾಗೂ ಸದಸ್ಯರುಗಳು ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುರೇಶಬಾವೆ, ಸದಸ್ಯರುಗಳಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ ತಂಗಚ್ಚ, ಸೋಮಣ್ಣ, ಕೆ.ಶೀಲ ಮಾನಸ, ನಿರೂಪ, ಜ್ಯೋತಿ, ಪಿ.ಡಿಓ ಸುರೇಶ, ಸೋಮವಾರಪೇಟೆ ತಾಲೂಕು ಬ್ಲಾಕ್ ಅಧ್ಯಕ್ಷ ಜಿ.ಜಿ.ಸತೀಶ, ಮಾದಾಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ದಾದು ಬೋಪಯ್ಯ, ಕುಂಬೂರು ಗ್ರಾಮದ ಅಧ್ಯಕ್ಷ ಸುಂದರ, ಮಾದಾಪುರ ಕಾಂಗ್ರೆಸ್ ಮುಖಂಡ ಮೇದೂರ ಹರೀಶ, ಮಾಜಿ ಮಂಡಲ ಪ್ರಧಾನ ಎ.ಬಿ.ಉಮ್ಮರ್, ಮಜೀದ್, ಮಾಜಿ ಉಪಾಧ್ಯಕ್ಷ ಅಣ್ಣಾ, ಇಬ್ರಾಹಿಂ ಇದ್ದರು.