ಸೋಮವಾರಪೇಟೆ, ನ. ೨೯: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿ ರುವ ಸಿಂಥೆಟಿಕ್ ಆಸ್ಟೊçÃಟರ್ಫ್ ಹಾಕಿ ಮೈದಾನಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಭೇಟಿ ನೀಡಿ, ಮೈದಾನದ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ ಅವರು ಸೋಮವಾರಪೇಟೆ ಭಾಗದ ಹಾಕಿ ಕ್ರೀಟಾಪುಟಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಂತಹAತವಾಗಿ ಸುಮಾರು ೫ ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿದ್ದು, ಇದೀಗ ಮೈದಾನವು ಉದ್ಘಾಟನೆಗೆ ಸಿದ್ಧವಾಗಿದೆ. ಅಂರ್ರಾಷ್ಟಿçÃಯ ಗುಣಮಟ್ಟದಂತೆ ಮೈದಾನ ನಿರ್ಮಾಣವಾಗಿದೆ ಎಂದರು.
ದೇಶದ ಹಾಕಿ ಕ್ಷೇತ್ರಕ್ಕೆ ಕೊಡಗು ಅನೇಕ ಆಟಗಾರರನ್ನು ಕೊಡುಗೆಯಾಗಿ ನೀಡಿದೆ. ಇಂದಿಗೂ ಹಲವಷ್ಟು ಆಟಗಾರರು ರಾಜ್ಯ, ದೇಶವನ್ನು ಪ್ರತಿನಿಧಿ ಸುತ್ತಿದ್ದಾರೆ. ಇಂತಹ ಹಿರಿಮೆ ಹೊಂದಿರುವ ಸೋಮ ವಾರಪೇಟೆಯಲ್ಲಿ ಇದೇ ಪ್ರಥಮವಾಗಿ ಟರ್ಫ್ ಮೈದಾನ ನಿರ್ಮಾಣ ವಾಗಿರುವುದು ಶ್ಲಾಘನೀಯ. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ವಿಶೇಷ ಕಾಳಜಿಯ ಮೇರೆ ಮೈದಾನ ನಿರ್ಮಾಣ ಗೊಂಡಿದ್ದು, ಮುಂದಿನ ದಿನಗಳಲ್ಲಿ ಹಲವಷ್ಟು ಕ್ರೀಡಾಕೂಟಗಳು ಜರುಗಲಿವೆ. ಇದರೊಂದಿಗೆ ಈ ಭಾಗದ ಕ್ರೀಟಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಲಭಿಸಲಿದೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಸೇರಿದಂತೆ ಕ್ರೀಡಾಪಟುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.