ಮಡಿಕೇರಿ, ನ. ೨೮: ರಾಜ್ಯದ ೨೮ ಕ್ಷೇತ್ರಗಳಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡುವ ಸಾಧ್ಯತೆ ಇದ್ದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂಬ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ಹೆಚ್.ಡಿ. ದೇವೇಗೌಡ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ಮರಗೋಡು ಬಳಿ ಬಕ್ಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಸಂಘಟನೆಗೆ ಧಕ್ಕೆ ತಂದು ಇದೀಗ ಪಕ್ಷ ತೊರೆ ದಿದ್ದಾರೆ.ಇದರಿಂದ ಸಂಘಟನೆಯಲ್ಲಿ ಹಿಂದುಳಿದಿದೆ. ಇದರಿಂದ ಕೊಡಗಿನಲ್ಲಿ ಕಾಂಗ್ರೆಸ್ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಗೆಲುವು ಸಾಧಿಸಿದೆ. ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೇ ಸದೃಢಗೊಳಿಸುವ ಕಾರ್ಯಕ್ಕೆ ಮುಂದಾಗುವುದು ಎಂದು ಹೇಳಿದರು.

ತಾ. ೨೭ ರಂದು ಪತ್ನಿ ಅನಿತಾ ಜೊತೆಗೆ ಕುಮಾರಸ್ವಾಮಿ ಖಾಸಗಿ ಭೇಟಿ ನೀಡಿ ಮೇಕೇರಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮರಗೋಡಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭ ಮಾಜಿ ಸಚಿವ ಸಾ.ರ. ಮಹೇಶ್, ಮಾಜಿ ಶಾಸಕ ಮಹದೇವ್, ಜೆಡಿಎಸ್ ಪ್ರಮುಖರಾದ ಮನ್ಸೂರ್ ಅಲಿ, ಸಿ.ಎಲ್. ವಿಶ್ವ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಂಕ್ರಾAತಿ ವೇಳೆಗೆ ಅಧ್ಯಕ್ಷರ ನೇಮಕ

ಸಂಕ್ರಾAತಿ ವೇಳೆಗೆ ಕೊಡಗು ಜೆಡಿಎಸ್ ಅಧ್ಯಕ್ಷರ ನೇಮಕ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಕತ್ತೂರಿನಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಿದ ಅವರು, ಜನವರಿ ೧೫ ರೊಳಗಾಗಿ ಸಂಕ್ರಾAತಿ ಸಂದರ್ಭವೇ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುತ್ತದೆ. ಕೊಡಗಿನಲ್ಲಿ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದೇನೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸೂಕ್ತವಾಗಬಲ್ಲ ಸಮರ್ಥ ಅಧ್ಯಕ್ಷರನ್ನೇ ಆಯ್ಕೆ ಮಾಡುವುದಾಗಿ ಜೆಡಿಎಸ್ ಮುಖಂಡರಿಗೆ ಕುಮಾರಸ್ವಾಮಿ ಭರವಸೆಯಿತ್ತರು.