ಮಡಿಕೇರಿ, ನ. ೨೮: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿ ಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ' ೨.೦ ಅಡಿಯಲ್ಲಿ ಮಾಹಿತಿ ಕಾರ್ಯ ಕ್ರಮವನ್ನು ಸಂಘಟನೆಯ ಮೈಸೂರು ಪ್ರಾದೇಶಿಕ ಕಚೇರಿಯಿಂದ ಕುಶಾಲ ನಗರ ಕೈಗಾರಿಕ ಪ್ರದೇಶದ ಬ್ಲಾನ್ ಕಾಫಿ ಕ್ಯೂರರ್ಸ್ನಲ್ಲಿ ನಡೆಸಲಾ ಯಿತು. ಉದ್ಯೋಗದಾತರು, ಉದ್ಯೋಗ ಗಳು ಹಾಗೂ ಪಿಂಚಣಿ ದಾರರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆ ಗಳನ್ನು ಬಗೆಹರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರವರ್ತನ ಅಧಿಕಾರಿ ಸೌರಭ್, ಎಸ್.ಎಸ್.ಎ ಪಿ.ಎಂ ಸ್ವಸ್ತಿಕ್ ಹಾಗೂ ತೇಜಸ್ ಕೃಷ್ಣನ್, ಇ.ಎಸ್.ಐ.ಸಿ ರವೀಂದ್ರನ್ ಎಚ್.ಎಸ್ ಹಾಜರಿದ್ದರು.