ಮಡಿಕೇರಿ, ನ. ೨೮: ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆ ದಿನವಾದ ಸೋಮವಾರ ಪ್ರತಿವರ್ಷ ದಂತೆ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಮಂಟಪ ಉತ್ಸವ ಹಾಗೂ ದಟ್ಟೋತ್ಸವ ನೆರವೇರಿತು.

ದೇವಾಲಯದಲ್ಲಿ ದೇವ ರಿಗೆ ವಿಶೇಷ ಅಲಂಕಾರ ದೊಂದಿಗೆ ನಿತ್ಯದ ಮಹಾ ಪೂಜೆ ಬಳಿಕ ಮುಂಭಾಗದ ಕಲ್ಯಾಣಿ ಯಲ್ಲಿ ತೆಪ್ಪೋತ್ಸವ ನಡೆಯಿತು. ಬಳಿಕ ದೇವಸ್ಥಾನದ ಒಳ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂ ಕೃತ ಮಂಟಪದಲ್ಲಿ ಇರಿಸಿ ವೇದ ಮಂತ್ರ ಪಾರಾಯಣ ಸಹಿತ ಪೂಜಾ ಉತ್ಸವ ನಡೆಸಲಾಯಿತು. ಬಳಿಕ ಮಹಾ ಮಂಗಳಾರತಿ ಜರುಗಿತು. ವಿಧಾನ ಪರಿ ಷತ್ ಮಾಜಿ ಸದಸ್ಯ ಮಂಡೆಪAಡ ಪಿ. ಸುನಿಲ್ ಸುಬ್ರಮಣಿ ಕುಟುಂಬ ದಿಂದ ಈ ಪ್ರಯುಕ್ತ ಪೂಜಾಸೇವೆ ಏರ್ಪ ಡಿಸಲಾಗಿತ್ತು. ಸದ್ಭಕ್ತರು ದೇಗುಲದ ಆಡಳಿತಾಧಿಕಾರಿ ದೇವರಾಜ್ ವ್ಯವ ಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳಾ ಸೇರಿದಂತೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಬಳಗ ಹಾಜರಿದ್ದು ಅರ್ಚಕರಾದ ಸಂತೋಷ್ ಭಟ್ ಶ್ರೀವತ್ಸ ಭಟ್ ಹಾಗೂ ಮಂಜುನಾಥ ಭಟ್ ನೇತೃತ್ವದಲ್ಲಿ ಪೂಜಾ ಸೇವೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.