ಉತ್ತರಕಾಶಿ ಸುರಂಗದಲ್ಲಿ ೧೭ ದಿನ ಸಿಲುಕಿದ್ದ ೪೧ ಮಂದಿಯ ರಕ್ಷಣೆ
ಉತ್ತರಕಾಶಿ, ನ. ೨೮: ತಾ.೧೨ರ ದೀಪಾವಳಿಯಂದು ಸುರಂಗ ವೊಂದರ ನಿರ್ಮಾಣ ಸಂದರ್ಭ ಕುಸಿದ ಭೂಮಿಯಿಂದ ಅವಶೇಷಗಳ ನಡುವೆ ಸಿಲುಕಿದ್ದ ೪೧ ಮಂದಿ ಕಾರ್ಮಿಕರನ್ನು ಯಶಸ್ವಿಯಾಗಿ ನಿರಂತರ ೪೦೦ ಕ್ಕೂ ಹೆಚ್ಚು ಗಂಟೆಗಳ ಕಾಲ ಸುರಂಗ ಅಗೆಯುವ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ತಾ.೧೨ ರ ಮುಂಜಾನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ರಾಷ್ಟಿçÃಯ ಹೆದ್ದಾರಿ ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳುತ್ತಿದ್ದ ಸಿಲ್ಕಾರಿಯ - ಬಾರ್ಕೋಟ್ ಸುರಂಗ ಮಾರ್ಗವು ಕುಸಿದ ಪರಿಣಾಮ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ೪೧ ಮಂದಿ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಅವರುಗಳನ್ನು ಹೊರಕ್ಕೆ ತೆಗೆಯಲು ಕೇಂದ್ರ - ರಾಜ್ಯ ಸರಕಾರಗಳು ಅಂತರರಾಷ್ಟಿçÃಯ ‘ಡ್ರಿಲ್ಲಿಂಗ್' ತಜ್ಞರ ಸಹಕಾರದಿಂದ ಕುಸಿದಿದ್ದ ಸುರಂಗವನ್ನು ಕೊರೆಯಲು ಕಳೆದ ೧೫ ದಿನಗಳಿಂದ ಪ್ರಯತ್ನಿಸಿ ಇಂದು ಯಶಸ್ವಿಯಾದವು. ಸ್ವಯಂ ಚಾಲಿತ ಆಗರ್ ಹೆಸರಿನ ಯಂತ್ರವು ಕೊರೆಯುತ್ತಿದ್ದ ಸಂದರ್ಭ ಅಡೆತಡೆಗಳು ಬಂದ ಪರಿಣಾಮ ನವದೆಹಲಿಯಿಂದ ‘ಖಚಿಣ ಒiಟಿiಟಿg’ ತಜ್ಞರನ್ನು ಕರೆಸಿ ಮಾನವಚಾಲಿತ ಪರಿಕರಗಳ ಸಹಕಾರದಿಂದಲೇ ಸುರಂಗ ಕೊರೆದು ಕಾರ್ಮಿಕರನ್ನು ರಕ್ಷಿಸಲಾಯಿತು.
ಸುಮಾರು ೬೦ ಮೀಟರ್ನಷ್ಟು ದೂರ ಸುರಂಗ ಕೊರೆದು ಪೈಪ್ಗಳನ್ನು ಅಳವಡಿಸಿ ಚಕ್ರವುಳ್ಳ ಸ್ಟೆçಚ್ಚರ್ಗಳ ಮೂಲಕ ಒಬ್ಬರ ನಂತರ ಒಬ್ಬರನ್ನು ಹೊರಕ್ಕೆ ತರಲಾಯಿತು. ಸುರಂಗದ ಬಳಿಯೇ ಸ್ಥಾಪಿಸಲ್ಪಟ್ಟ ತಾತ್ಕಾಲಿಕ ಆರೋಗ್ಯ ತಪಾಸಣಾ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ೪೧ ಮಂದಿಯನ್ನು ಪ್ರತ್ಯೇಕವಾಗಿ ೪೧ ಆಂಬುಲೆನ್ಸ್ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರುಗಳಿಗೆ ೪೧ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆಯನ್ನು ಕಳೆದ ಕೆಲವು ದಿನಗಳ ಹಿಂದೆಯೇ ಕಾಯ್ದಿರಿಸಲಾಗಿತ್ತು. ಎನ್.ಡಿ. ಆರ್.ಎಫ್, ಎಸ್.ಡಿ.ಆರ್.ಎಫ್ ಸಿಬ್ಬಂದಿ ಹಾಗೂ ಸೇನಾ ಪಡೆಯ ಸಹಕಾರದಿಂದ ರಕ್ಷಣಾ ಕಾರ್ಯ ನಡೆಯಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಹಾಗೂ ಸಚಿವ ನಿವೃತ್ತ ಜನರಲ್ ವಿ.ಕೆ ಸಿಂಗ್ ಅವರುಗಳು ಸ್ಥಳದಲ್ಲಿ ಹಾಜರಿದ್ದು, ರಕ್ಷಿಸಲ್ಪಟ್ಟ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯ ನಾಗರಿಕರು, ಗ್ರಾಮಸ್ಥರು ಜಯಘೋಷಗಳನ್ನು ಕೂಗುತ್ತಾ ಹೂವಿನ ಹಾರ, ಶಾಲುಗಳನ್ನು ಕಾರ್ಮಿಕರಿಗೆ ಅರ್ಪಿಸಿ ಸ್ವಾಗತಿಸಿದರು. ೧೭ ದಿನಗಳ ಕಾಲ ಕಿರಿದಾದ ೬ ಇಂಚ್ ಪೈಪ್ವೊಂದನ್ನು ಕೊರೆದ ಅವಶೇಷಗಳ ನಡುವೆ ಅಳವಡಿಸಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ಆಹಾರ, ನೀರು ಸೇರಿದಂತೆ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿತ್ತು. ಕಾರ್ಮಿಕರ ಸುರಕ್ಷತೆಗಾಗಿ ಸ್ಥಳದಲ್ಲಿಯೇ ಸ್ಥಳೀಯ ಅರ್ಚಕರು ಪೂಜೆ ನಡೆಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.