ಗೋಣಿಕೊಪ್ಪ ವರದಿ, ನ. ೨೬: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಹಾಕಿ ಲೀಗ್ ಟೂರ್ನಿ ಫೈನಲ್‌ನಲ್ಲಿ ಮೂರ್ನಾಡು ಬ್ಲೇಜ್ ಕ್ಲಬ್ ತಂಡವು ಜಯಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತು. ವಿರೋಚಿತ ಸೋಲನುಭವಿಸಿದ ಬೇಗೂರು ಈಶ್ವರ ಯೂತ್ ಕ್ಲಬ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಕ್ಟೋಬರ್ ತಿಂಗಳಿAದ ಆರಂಭಗೊAಡು ಲೀಗ್ ಮತ್ತು ನಾಕೌಟ್ ಹಂತಗಳಲ್ಲಿ ನಡೆದ ಟೂರ್ನಿಗೆ ತೆರೆ ಎಳೆಯಲಾಯಿತು. ೨೫ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿ, ೪೨ ಪಂದ್ಯಗಳು ನಡೆದವು. ಒಟ್ಟು ೨೦೬ ಗೋಲುಗಳು ದಾಖಲಾದವು.
ಫಲಿತಾಂಶ : ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಕೊನೆಯ ೧೦ ನಿಮಿಷದÀಲ್ಲಿ ಉತ್ತಮ ಆಟ ಮೂಡಿ ಬಂತು. ಬ್ಲೇಜ್ ತಂಡವು ಶೂಟೌಟ್‌ನಲ್ಲಿ ೩-೨ ಗೋಲುಗಳಿಂದ ಗೆದ್ದು ಬೀಗಿತು. ೫೨ ನೇ ನಿಮಿಷದಲ್ಲಿ ಗ್ಯಾನ್, ಬೇಗೂರು ಪರ ೫೭ ನೇ ನಿಮಿಷದಲ್ಲಿ ಚಿರಂತ್ ಗೋಲು ಹೊಡೆದು ಸಮಬಲ ಸಾಧಿಸಿದರು. ಟೈಬ್ರೇಕರ್‌ಗೆ ಶೂಟೌಟ್ ಮೊರೆ ಹೋಗಲಾಯಿತು. ಬ್ಲೇಜ್ ಆಟಗಾರರಾದ ಸಜನ್, ಮೇರಿಯಂಡ ರಾಯಲ್, ಬೇಗೂರು ತಂಡದ ಬೋಪಣ್ಣ ಗೋಲು ಹೊಡೆದರು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಬ್ಲೇಜ್ ತಂಡದ ವಲ್ಲಂಡ ಸೋಮಣ್ಣ ಉತ್ತಮ ಗೋಲ್ ಕೀಪರ್, ಮಲ್ಮ ತಂಡದ ಮಾದಂಡ ಅಪ್ಪಯ್ಯ ಬೆಸ್ಟ್ ಡಿಫೆಂಡರ್, ಬೇಗೂರು ತಂಡದ ಮಾಪಣಮಾಡ ಬೋಪಣ್ಣ ಬೆಸ್ಟ್ ಮಿಡ್ ಫೀಲ್ಡರ್, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಆಟಗಾರ ಕಾಂಡAಡ ಕುಶಾಲಪ್ಪ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿ ಸ್ವೀಕರಿಸಿದರು.
ನಿರ್ದೇಶಕರಾಗಿ ಕರವಂಡ ಅಪ್ಪಣ್ಣ, ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್, ಚೆಯ್ಯಂಡ ಅಪ್ಪಚ್ಚು, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿನ್, ಪಟ್ರಪಂಡ ಸಚಿನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಬೊಟ್ಟಂಗಡ ಕೌಶಿಕ್, ಚಂದಪAಡ ಆಕಾಶ್, ಚೋಯಮಾಡಂಡ ಚೆಂಗಪ್ಪ, ಮೇಕತಂಡ ತೀಸಾ, ಮೂಕಚಂಡ ನಾಚಪ್ಪ, ಪಂಡೀರ ಸುಬ್ರಮಣಿ, ಅರುಣ್, ಸಣ್ಣುವಂಡ ಲೋಕೇಶ್, ಕೊಂಡೀರ ಕೀರ್ತಿ, ಅಮ್ಮಾಂಡೀರ ಚೇತನ್, ಕೊಕ್ಕಲೆಮಾಡ ಗೌತಮಿ ಕಾರ್ಯನಿರ್ವಹಿಸಿದರು. ಚೆಪ್ಪುಡೀರ ಎ. ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.
ಒಲಿಂಪಿಯನ್ ಅಶ್ವಿನಿ ನಾಚಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರೆತು ಉತ್ತಮ ಆಟವನ್ನು ನಾವು ನೋಡುವಂತಾಗಿದೆ ಎಂದರು.
ಕಾಲ್ಸ್ ಶಾಲೆ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ, ಉದ್ಯಮಿ ನಾಮೇರ ಬೋಪಣ್ಣ, ಕಾಫಿ ಬೆಳೆಗಾರ ಚೆಪ್ಪುಡೀರ ಮಂದಣ್ಣ, ಕೂರ್ಗ್ ಅಧ್ಯಕ್ಷ ಪಳಙಂಡ ಲವಕುಮಾರ್, ಕಾರ್ಯದರ್ಶಿ ಅಮ್ಮಾಂಡೀರ ಚೇತನ್, ನಿರ್ದೇಶಕಿ ಯಮುನಾ ಚೆಂಗಪ್ಪ, ರೇಷ್ಮಾ, ಶಿವಚಾಳಿಯಂಡ ವಿದ್ಯಾ ಬಹುಮಾನ ವಿತರಿಸಿದರು.
ನಿನ್ನೆ ನಡೆದ ಸೆಮಿಫೈನಲ್‌ನಲ್ಲಿ ಮೂರ್ನಾಡು ಬ್ಲೇಜ್ ಕ್ಲಬ್ ತಂಡವು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ೨೫ ನೇ ನಿಮಿಷದಲ್ಲಿ ರಾಯಲ್, ೩೫ ರಲ್ಲಿ ನಾಣಯ್ಯ ತಲಾ ಒಂದೊAದು ಗೋಲು ಹೊಡೆದರು.
ಬೇಗೂರು ಈಶ್ವರ ಯೂತ್‌ಕ್ಲಬ್ ತಂಡ ಕಕ್ಕಬ್ಬೆ ಮಲ್ಮ ವಿರುದ್ದ ೫-೨ ಗೋಲುಗಳ ಜಯ ಪಡೆದುಕೊಂಡಿತು. ೨೧, ೨೮, ೪೩ ನೇ ನಿಮಿಷಗಳಲ್ಲಿ ಮಂಜುನಾಥ್ ಮೂರು ಗೋಲು ಬಾರಿಸಿದರು. ೧೧ ನೇ ನಿಮಿಷದಲ್ಲಿ ಬೋಪಣ್ಣ, ೪೦ ರಲ್ಲಿ ಚೆರಿತ್, ಮಲ್ಮ ಪರ ೩ ರಲ್ಲಿ ಜೋಯಪ್ಪ, ೭ ರಲ್ಲಿ ಫಾಹದ್ ತಲಾ ಒಂದೊAದು ಗೋಲು ಬಾರಿಸಿದರು.