ಮಡಿಕೇರಿ, ನ. ೨೬: ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ವಿದ್ಯುತ್ ವ್ಯವಸ್ಥೆಗೆ ಸಂಬAಧಿಸಿದAತೆ ಹಲವು ಸಮಸ್ಯೆಗಳು ಇವೆ. ಇದರೊಂದಿಗೆ ಪ್ರಸ್ತುತದ ಪರಿಸ್ಥಿತಿಯಲ್ಲಿ ಮತ್ತಷ್ಟು ಅನಾನುಕೂಲ ಎದುರಾಗುತ್ತಿದೆ ಎಂಬದಾಗಿ ವಿದ್ಯುತ್ ಬಳಕೆದಾರರು, ಬಳಕೆದಾರರ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಸರಕಾರ ಹೊಸದಾಗಿ ಜಾರಿಗೆ ತಂದ ಹಲವು ನಿಯಮಗಳು ಗ್ರಾಹಕರಿಗೆ ಹೊರೆಯಾಗುತ್ತಿದೆ; ಇದರೊಂದಿಗೆ ಕೆಲವು ನಿಯೋಜಿತ ಅಧಿಕಾರಿಗಳೂ ಕೆಲವು ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎಂಬ ಆಕ್ಷೇಪ ಕೇಳಿ ಬಂದಿದೆ. ಶೀಘ್ರ ವಿದ್ಯುತ್, ಐಪಿ ಸೆಟ್‌ಗಳ ಸಬ್ಸಿಡಿ ರದ್ದು, ಯುಎನ್‌ಐಪಿಗೆ ಅನುದಾನ ಸಿಗದಿರುವುದು, ಗೃಹಜ್ಯೋತಿ ಯೋಜನೆ ಬಳಿಕ ಗ್ರಾಹಕರಿಗೆ ಹೆಚ್ಚುವರಿ ಮೊತ್ತದ ಬಿಲ್ ಕುರಿತಾಗಿ ಯಾವುದೇ ಮುನ್ಸೂಚನೆ ನೀಡದೆ, ಅಥವಾ ನೋಟೀಸ್ ನೀಡದೆ ಸಂಪರ್ಕ ಕಡಿತಗೊಳಿಸುತ್ತಿರುವ ಪ್ರಕರಣಗಳು ಇದೀಗ ಹೆಚ್ಚಾಗುತ್ತಿದೆ. ಇದು ಸರಿಯಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದು ಮಾತ್ರವಲ್ಲದೆ ಐಪಿ ಸೆಟ್‌ಗಳಿಗೆ ಸಂಬAಧಿಸಿದAತೆ ೫೦೦ ಮೀಟರ್ ಅಂತರದ ನಂತರ ಸೋಲಾರ್ ಅಳವಡಿಸಬೇಕೆಂಬ ನಿಯಮ ರೈತರಿಗೆ ಹೊಡೆತವಾಗಿದೆ; ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ಸೋಲಾರ್ ಬಳಸಿ ರೈತರು ಪ್ರಯೋಜನ ಪಡೆಯುವುದು ಪ್ರಯಾಸಕರವಾಗಲಿದ್ದು, ಇತರೆಡೆಗಳಿಗೂ ಜಿಲ್ಲೆಗೂ ಹೋಲಿಕೆಯಿಲ್ಲ ಎಂದು ಗ್ರಾಹಕರು ಹಾಗೂ ಬಳಕೆದಾರರ ಪ್ರತಿನಿಧಿಯೊಬ್ಬರು ‘ಶಕ್ತಿ’ಯೊಂದಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿರ್ವಹಣೆಗೆ ಸಂಬAಧಿಸಿದAತೆಯೂ ಹಲವಷ್ಟು ಸಮಸ್ಯೆಗಳು ನಿರಂತರವಾಗಿದೆ. ಅಗತ್ಯ ಸಿಬ್ಬಂದಿ - ಸಾಮಗ್ರಿಗಳ ಕೊರತೆಯೂ ಇದೆ ಎಂದು ಅವರು ವಿವರಿಸಿದ್ದಾರೆ.

ನಿಯೋಜಿತ ಸಿಬ್ಬಂದಿಗೆ ಕಿರಿಕಿರಿ

ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕುಶಾಲನಗರ ವಿಭಾಗಕ್ಕೆ ಖಾಲಿಯಿದ್ದ ಸ್ಥಾನಕ್ಕೆ ಎಇಇ ಒಬ್ಬರನ್ನು ಇಲಾಖೆ ನಿಯೋಜಿಸಿದೆ. ಈ ಸ್ಥಾನಕ್ಕೆ ಎಂ.ಎಸ್. ಮಂಜುನಾಥ್ ಎಂಬವರನ್ನು ನಿಯೋಜಿಸಲಾಗಿದೆ. ಆದರೆ ಈ ಬಗ್ಗೆ ಕ್ಷೇತ್ರದ ಪ್ರಮುಖ ಜನಪ್ರತಿನಿಧಿ ಈ ನೇಮಕವನ್ನು ಒಪ್ಪಿಕೊಳ್ಳದೆ, ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕೇಳಿಬಂದಿದೆ. ಇದು ಮಾತ್ರವಲ್ಲದೆ ಮಡಿಕೇರಿ ವಿಭಾಗದಲ್ಲಿರುವ ಅಧಿಕಾರಿಯೊಬ್ಬರು ಕುಶಾಲನಗರದ ಪ್ರಭಾರ ಜವಾಬ್ದಾರಿಯೂ ತಮಗೇ ಬೇಕೆಂಬAತೆ ಪ್ರಯತ್ನ ನಡೆಸುತ್ತಿದ್ದಾರೆ. ಇದು ನೂತನ ಅಧಿಕಾರಿಯ ಕಾರ್ಯನಿರ್ವಹಣೆಗೆ ತೊಂದರೆಯಾಗಿದ್ದು, ಇವರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಆರೋಪ ಕೇಳಿ ಬಂದಿದೆ. ಕ್ಷೇತ್ರದ ಜನಪ್ರತಿನಿಧಿ ಖಾಲಿ ಹುದ್ದೆ ನೇಮಕಾತಿಗೆ ಉತ್ಸುಕತೆ ತೋರದೆ, ಇದೀಗ ಇಲಾಖೆಯಿಂದ ನಿಯೋಜಿಸಲ್ಪಟ್ಟಿರುವ ಅಧಿಕಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಗೊಂಡಿದೆ.