ಭಾಗಮಂಡಲ, ನ. ೨೬: ಜಗತ್ತಿನ ಯಾರ ಮೇಲೂ ದಂಡೆತ್ತಿಹೋಗದೆ ಎಲ್ಲ ಕಾಲಕ್ಕೂ ಎಲ್ಲರ ಒಳಿತಿಗಾಗಿ ಸನಾತನ ಸಂಸ್ಕೃತಿಯ ಆಚರಣೆ ಗಳನ್ನು ಮುಂದುವರೆಸಿ ಕೊಂಡು ಬಂದವರು ಹಿಂದೂಗಳು ಎಂದು ಸುವರ್ಣ ಸುದ್ದಿ ವಾಹಿ ನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಿದರು.

ಭಾಗಮಂಡಲ ಸಂಗಮ ತಟದಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ನಡೆದ ಕಾವೇರಿಮಾತೆಗೆ ಆರತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ಇಸ್ರೇಲ್ ಪ್ಯಾಲಿಸ್ತೇನ್ ಯುದ್ಧವನ್ನು ಬೊಟ್ಟು ಮಾಡಿದ ಅವರು ಭಾರತದ ಮುಕುಟಮಣಿ ಕಾಶ್ಮೀರದಲ್ಲಿ ವಿದ್ರೋಹಿಗಳ ಪೈಶಾಚಿಕ ಕೃತ್ಯಗಳ ಕುರಿತು ನೆನಪು ಮಾಡಿದರು.

ಅಂದು ಕಾಶ್ಮೀರದಲ್ಲಿ ಧೈರ್ಯವಿದ್ದರೆ ತ್ರಿವರ್ಣಧ್ವಜ ಹಾರಿಸಿ ಎಂದು ಭಾರತೀಯರಿಗೆ ಸವಾಲು ನೀಡಲಾಗಿತ್ತು. ಇಂದು ಅದೇ ಕಾಶ್ಮೀರದಲ್ಲಿ ಶಾಂತಿ ಕಾಣುತ್ತಾ ಸದಾ ತ್ರಿವರ್ಣಧ್ವಜ ಹಾರಾಟದೊಂದಿಗೆ ಉತ್ತರ ನೀಡಲಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು. ಭಾಗಮಂಡಲದಲ್ಲಿ ನಡೆಯುತ್ತಿರುವ ಕಾವೇರಿ ಆರತಿಯಂತಹ ಕಾರ್ಯಕ್ರಮದಿಂದ ನಮ್ಮ ಸಂಸ್ಕೃತಿಯ ಮಹತ್ವ ಭಾರತದ ಗಡಿಯಾಚೆಗೂ ಪಸರಿಸುವಂತಾಗಿದೆ ಎಂದು ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟರು.

ವಿ. ಹಿಂ. ಪ. ದಕ್ಷಿಣ ಪ್ರಾಂತದ ಕಾರ್ಯದರ್ಶಿ ಜಗನ್ನಾಥ ಶಾಸ್ತಿç ಮಾತನಾಡಿ, ಅಯೋಧ್ಯೆಯ ಶ್ರೀ ರಾಮ ಮಂದಿರದೊAದಿಗೆ ಭವಿಷ್ಯದಲ್ಲಿ ರಾಮರಾಜ್ಯದ ಮೂಲಕ ಅಖಂಡ ಭಾರತದ ಆಶಯ ಸಾಕಾರ ಗೊಳಿಸೋಣ ಎಂದರು. ಇಂದು ಅಮೇರಿಕಾ ದಂತಹ ದೇಶದಲ್ಲಿ ನೂರಾರು ಮಂದಿರ ಗಳನ್ನು ನಿರ್ಮಿಸುವ ಮೂಲಕ ಭಾರತೀಯ ಸಂಸ್ಕೃತಿ, ಸನಾತನ ಪರಂಪರೆಯ ಆಚರಣೆಯನ್ನು ಜಗತ್ತಿಗೆ ಪರಿಚಯಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳನ್ನು ವಿಶ್ವವು ಪಾಲಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು. ಜಾಲಿ ಪೂವಪ್ಪ ಕಾರ್ಯ ಕ್ರಮ ನಿರೂಪಿಸಿ ದರು.

ಸುಳ್ಯದ ಕೇಶವ ಪ್ರತಿಷ್ಠಾನದ ನಾಗರಾಜ್ ಭಟ್ ನೇತೃತ್ವದಲ್ಲಿ ವೇದಮಂತ್ರ ಕಾವೇರಿ ಸ್ತುತಿ ನಡೆಯಿತು. ಸ್ಥಳೀಯ ಅರ್ಚಕರಾದ ರವಿಭಟ್, ಹರೀಶ್‌ಭಟ್ ಅವರುಗಳನ್ನೊಳಗೊಂಡು ಸಂಘಟನೆಯ ಪ್ರಮುಖ ಮುನಿಕೃಷ್ಣ ಅವರ ನೇತೃತ್ವದಲ್ಲಿ ಪರಿಷತ್ತಿನ ಪ್ರಮುಖರು ಹಾಗೂ ಸದ್ಭಕ್ತರ ಉಪಸ್ಥಿತಿಯಲ್ಲಿ ಕಾವೇರಿ ಆರತಿ ನಡೆದು ಬಳಿಕ ಅನ್ನಸಂತರ್ಪಣೆ ನೆರವೇರಿತು.