ಮಡಿಕೇರಿ, ನ. ೨೬: ಸಂವಿಧಾನ ಕೇವಲ ಲಿಖಿತ ದಾಖಲೆಯಲ್ಲ, ಅದೊಂದು ಜನರ ಆಶೋತ್ತರಗಳಿಗೆ ಸ್ಪಂದಿಸುವ ದಾಖಲೆ ಎಂದು ಉಚ್ಚನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಾಧೀಶರಾದ ಎಂ.ಜಿ. ಉಮಾ ಬಣ್ಣಿಸಿದರು.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಜಿಲ್ಲಾಮಟ್ಟದ ವಕೀಲರ ಕ್ರೀಡಾಕೂಟ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ವಕೀಲರ ಕ್ರೀಡಾಕೂಟ ನಡೆಯುತ್ತಿರುವುದು ಶ್ಲಾಘನೀಯ. ಕೊಡಗು ಧೈರ್ಯ, ಸ್ಥೆöÊರ್ಯದ ಜೊತೆಗೆ ಕ್ರೀಡೆಗೂ ಹೆಸರುವಾಸಿ. ಇಲ್ಲಿನ ಅನೇಕ ಪ್ರತಿಭೆಗಳು ರಾಷ್ಟç, ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಕೊಡಗಿನಲ್ಲಿ ಹಲವು ಕ್ರೀಡಾಕೂಟಗಳು ಆಯೋಜನೆಗೊಳ್ಳುವುದರಿಂದ ಇಲ್ಲಿನ ಜನರಲ್ಲಿ ಕ್ರೀಡಾ ಜಾಗೃತಿ ಮೂಡುತ್ತಿದೆ ಎಂದರು.
ಬಾಂಧವ್ಯ ವೃದ್ಧಿಸಲು ಈ ರೀತಿ ಕಾರ್ಯಕ್ರಮ ಪೂರಕವಾಗಿದ್ದು, ನಿತ್ಯ ಕೋರ್ಟ್ ಕಲಾಪ, ವಾದ-ವಿವಾದ ಎಂದು ಜಂಜಾಟದಲ್ಲಿರುವ ವಕೀಲರ ಮನೋಲ್ಲಾಸಕ್ಕೆ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ವಕೀಲರ ಪಾಲ್ಗೊಳ್ಳುವಿಕೆ ಕೂಡ ಇರಬೇಕೆಂದು ಕರೆ ನೀಡಿದ ಅವರು, ಭಾರತೀಯ ಪ್ರಜೆಯ ಅಪೇಕ್ಷೆಗೆ ಪೂರಕವಾಗಿ ಭಾರತ ಸಂವಿಧಾನ ರಚನೆಯಾಗಿದೆ. ಭಾರತ ಸ್ವಾತಂತ್ರö್ಯಗೊAಡ ಬಳಿಕ ಸಂವಿಧಾನ ಕರಡು ಸಮಿತಿ ಮೂಲಕ ಸಂವಿಧಾನ ರಚನೆ ಮಾಡಲಾಯಿತು. ಅಲ್ಪಾವಧಿಯಲ್ಲಿ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನ ರಚನೆ ಮಾಡಲಾಯಿತು. ೧೯೫೦ ರಲ್ಲಿ ಸಂವಿಧಾನ ಜಾರಿಯಾಯಿತು ಎಂದು ಮಾಹಿತಿ ನೀಡಿದರು. ಜಿಲ್ಲಾ ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಂ ಪ್ರಸಾದ್ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಕ್ರೀಡಾಸ್ಫೂರ್ತಿಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ದೇಹವನ್ನು ಚಲನಾಶೀಲತೆಯಲ್ಲಿಡಲು ಕ್ರೀಡೆಗಳು ಪೂರಕ. ದಿನದ ಕೆಲ ಸಮಯವನ್ನು ದೈಹಿಕ ಚಟುವಟಿಕೆಗೆ ಮೀಸಲಿಡಲು ಕರೆ ನೀಡಿದರು.
ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ದ್ವೇಷ ಮರೆತು ಉತ್ತಮ ಬಾಂಧವ್ಯ ಸೃಷ್ಟಿ ಮಾಡಲು ಕ್ರೀಡಾಕೂಟಗಳಿಂದ ಸಾಧ್ಯ. ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ. ವಕೀಲರ ಕ್ರೀಡಾಕೂಟಗಳು ಪ್ರತಿವರ್ಷ ನಡೆಯಬೇಕು ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಸಂಘಗಳು ಕ್ರೀಡಾಕೂಟ ಆಯೋಜನೆ ನೇತೃತ್ವ ವಹಿಸಿಕೊಳ್ಳಬೇಕು ಎಂದು ಎಂದು ಸಲಹೆ ನೀಡಿದ ಅವರು, ತಾನು ಕಾನೂನು ಸಚಿವನಾಗಿದ್ದ ಸಂದರ್ಭ ‘ಕರ್ನಾಟಕ ಜ್ಯುಡಿಷಿಯಲ್ ಅಕಾಡೆಮಿ’ ರಚಿಸಿದ್ದೆ ಎಂದು ಸ್ಮರಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದೇಶ ವ್ಯವಸ್ಥಿತವಾಗಿ ನಡೆಯಲು ಸಂವಿಧಾನ ರಚನೆಯಾಗಿದೆ. ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನ ವ್ಯವಸ್ಥೆಯಲ್ಲಿ ನಾವು೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮುನ್ನಡೆಯುತ್ತಿದ್ದೇವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ದೇಶದ ಅಡಿಪಾಯವಾಗಿವೆೆ. ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ತಿದ್ದುಪಡಿ ತರಲು ಅವಕಾಶವಿದೆ. ೧೨೮ ಬಾರಿ ತಿದ್ದುಪಡಿಯನ್ನೂ ಮಾಡಲಾಗಿದೆ. ಈ ವರ್ಷ ಮಹಿಳಾ ಮೀಸಲಾತಿ ಕಾಯಿದೆ ಕೂಡ ಅನುಮೋದನೆ ಪಡೆದುಕೊಂಡಿದ್ದು, ಶೇ ೩೩ ಮೀಸಲಾತಿ ಇರುತ್ತದೆ. ಸಂವಿಧಾನ ಘನತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸದಾ ಸ್ಮರಣೀಯರು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯ ಒತ್ತಡದಲ್ಲಿರುವ ವಕೀಲರಿಗೆ ಈ ರೀತಿ ಕ್ರೀಡಾಕೂಟ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎಂದರು.
ಜಿಲ್ಲಾ ಸರಕಾರಿ ವಕೀಲರಾದ ಶ್ರೀಧರನ್ ನಾಯರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷಿö್ಮ, ಪ್ರಿನ್ಸಿಪಾಲ್ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಮುನಿರತ್ನಮ್ಮ, ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ನಾಗೇಶ್, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ, ಕುಶಾಲನಗರದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಸೋಮವಾರಪೇಟೆ ಅಧ್ಯಕ್ಷ ವಿಠಲ ಕಾಟ್ನಮನೆ, ಪೊನ್ನಂಪೇಟೆ ಅಧ್ಯಕ್ಷ ಮುತ್ತಪ್ಪ, ಮಡಿಕೇರಿ ಸಂಘದ ಕಾರ್ಯದರ್ಶಿ ಬಿ.ಎಂ. ಕೇಶವ, ಉಪಾಧ್ಯಕ್ಷ ಎಂ.ಪಿ. ನಾಗರಾಜು, ಖಜಾಂಜಿ ರವಿಶಂಕರ್, ಕ್ರೀಡಾ ಕಾರ್ಯದರ್ಶಿ ದುಗ್ಗಳ ಕಪಿಲ್ ಕುಮಾರ್ ಭಾಗವಹಿಸಿದ್ದರು.