ಶನಿವಾರಸಂತೆ, ನ. ೨೬: ಪಟ್ಟಣದಿಂದ ೭ ಕಿ.ಮೀ. ದೂರ ಸಾಗಿದರೆ ಸಿಗುವ ಕೊಡಗು-ಹಾಸನÀ ಗಡಿಭಾಗ ಹೊಸೂರು ಗ್ರಾಮದಲ್ಲಿರುವ ೪೦೦ ವರ್ಷಗಳ ಇತಿಹಾಸವಿರುವ ಚೋಳರಕಾಲದ ಶ್ರೀ ಬೆಟ್ಟದ ಬಸವೇಶ್ವರ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ತಾ.೨೭ ರಂದು(ಇAದು) ಇತಿಹಾಸ ಪ್ರಸಿದ್ಧ ಕೌಟೇಕಾಯಿ ಜಾತ್ರೆ ನಡೆಯಲಿದೆ.
ಹೊಸೂರು, ಸುತ್ತಮುತ್ತಲ ಗ್ರಾಮಗಳಲ್ಲಿರುವ ಜನರು ಕೃಷಿಕರು ಹಾಗೂ ಪಶುಪಾಲಕರೇ ಆಗಿದ್ದರು. ಗೋವುಗಳೇ ಜೀವನಾಧರವಾಗಿದ್ದವು. ಗೊಬ್ಬರದ ರಾಶಿಯಲ್ಲಿ ಬೆಳೆಯುತ್ತಿದ್ದ ಕೌಟೆಕಾಯಿ ಕ್ರಿಮಿನಾಶಕವಾಗಿ, ಸಾವಯವ ಗೊಬ್ಬರವಾಗುತ್ತಿತ್ತು. ಗೋವುಗಳಿಗೆ ಗಾಯವಾದಾಗ ಕೌಟೇಕಾಯಿ ರಸ ಹಚ್ಚಿ ಗುಣಪಡಿ ಸುತ್ತಿದ್ದರು. ಅಷ್ಟು ಮಾತ್ರವಲ್ಲದೇ ಕಾಯಿಯ ತಿರುಳು ತೆಗೆದು ಅದರಲ್ಲಿ ಎಣ್ಣೆಬತ್ತಿ ಇಟ್ಟು ದೀಪ ಬೆಳಗಿಸಿ ದೇವರ ಪೂಜೆ ಮಾಡುತ್ತಿದ್ದರು. ಕತ್ತಲಲ್ಲಿ ಬೆಳಕು ನೀಡಲು ಸೀಮೆಎಣ್ಣೆ ದೀಪವಾದರೆ ದೇವರಿಗೆ ಕೌಟೆಕಾಯಿ ದೀಪ ಹಚ್ಚಿ ಪೂಜಿಸುತ್ತಿದ್ದರು.
ಚೋಳರ ಕಾಲದಿಂದ ಪೂಜಿಸಲ್ಪಟ್ಟ ಬಸವೇಶ್ವರ ದೇವರನ್ನು ಇಂದಿಗೂ ಗ್ರಾಮದ ವಿವಿಧ ಸಮುದಾಯದವರು ಮನೆದೇವರಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ೯ ರಿಂದ ಪೂಜೆ ನಡೆಯುತ್ತದೆ.
ಕೌಟೇಕಾಯಿ ಜಾತ್ರೆ ಹೊಸೂರು ಕಲ್ಲಪ್ಪನಹಳ್ಳಿ ಹಾಗೂ ತಡಕಲು ಗ್ರಾಮದ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯುತ್ತದೆ. ಕೊಡಗು-ಹಾಸನ ಜಿಲ್ಲೆಯ ಜನರು ಜಾತ್ರೆÀ್ರಯಲ್ಲಿ ಭಾಗಿಯಾಗುತ್ತಾರೆ. ಜಾತ್ರೆÀ್ರಯ ದಿನ ಗ್ರಾಮ ಹಾಗೂ ದೇವಾಲಯವನ್ನು ಕೌಟೇಕಾಯಿಯಿಂದ ಅಲಂಕರಿಸು ತ್ತಾರೆ. ಕೌಟೇಕಾಯಿ ರಾಶಿಯ ಮೇಲೆ ಹಣತೆ ಬೆಳಗಿಸಿ ಜಾತ್ರಾ ಸಮಾ ರಂಭವನ್ನು ಉದ್ಘಾಟಿಸಲಾಗುತ್ತದೆ.
ದೇವಾಲಯದಿಂದ ೨ ಕಿ.ಮೀ ದೂರದ ಅಂಕಾಲ್ ದೀಣೆಗೆ ಬಸವೇಶ್ವರ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪೂಜಿಸಿ ಪುನಃ ದೇವಾಲಯಕ್ಕೆ ತರಲಾಗುತ್ತದೆ. ಆ ಸಂದರ್ಭ ಅಲ್ಲಿ ಯುವಕರು ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರು ಕವಟೆಕಾಯಿ ಎಸೆದಾಡುತ್ತಾರೆ. ಶ್ರಧ್ಧಾಭಕ್ತಿಯಿಂದ ಜಾತ್ರೆ ನಡೆಯುತ್ತದೆ.
ದೇವಾಲಯದಲ್ಲಿ ಜಾತ್ರೆ ನಂತರ ೮ ದಿನಕ್ಕೆ ಕಾರ್ತಿಕ ಮಾಸದ ಪೂಜೆ ವಿಜೃಂಭಣೆಯಿAದ ನಡೆಯುತ್ತದೆ. ವಿಳ್ಯದೆಲೆ ಮೇಲೆ ೧೦೧ ದೀಪಗಳನ್ನಿಟ್ಟು ಅಲಂಕರಿಸಿ, ದೀಪ ಬೆಳಗಿಸಿ ಪೂಜಿಸಲಾಗುತ್ತದೆ.
ಜಾತ್ರಾ ಸಮಾರಂಭದಲ್ಲಿ ಸಮಿತಿ ವತಿಯಿಂದ ಸಾಧಕರನ್ನು, ಪತ್ರಕರ್ತರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ತಾ. ೨೭ರಂದು ಮಧ್ಯಾಹ್ನ ನಡೆಯುವ ಸನ್ಮಾನ ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ಕೆ.ಟಿ. ಬೆಳ್ಳಿಗೌಡ್ರು ಕಾಮನಹಳ್ಳಿ, ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಹಾಯಕ ಎಚ್.ಬಿ. ಸೋಮೇಗೌಡ ಹಾಗೂ ವಿಜಯ ವಾಣಿ ವರದಿಗಾರ ಕೆ.ಎನ್.ದಿನೇಶ್ ಮಾಲಂಬಿ ಅವರನ್ನು ಸನ್ಮಾನಿಸಲಾ ಗುತ್ತದೆ. ಮುಖ್ಯ ಅತಿಥಿಗಳಾಗಿ ಶಾಸಕ ಸಿಮೆಂಟ್ ಮಂಜು, ಮುಖಂಡ ಮುರಳಿ ಮೋಹನ್, ರಾಜ್ಯ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್, ಉದ್ಯಮಿ ತೀರ್ಥಾನಂದ್, ಕೌಕೋಡಿ ಎಸ್ಟೇಟ್ ವ್ಯವಸ್ಥಾಪಕ ಅರುಣ್ ಬಾವೆ, ಹೆಚ್.ಕೆ. ಕುಮಾರಸ್ವಾಮಿ ಇತರರು ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
-ಶ.ಗ.ನಯನತಾರಾ