ಮಡಿಕೇರಿ, ನ. ೨೬: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ನಡೆದ ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರದ ಕೋಟೆ ಆವರಣದಲ್ಲಿರುವ ಸರಕಾರಿ ವಸ್ತು ಸಂಗ್ರಾಹಲಯದಲ್ಲಿ ಅಂಚೆ ಚೀಟಿಗಳು ಮತ್ತು ಪ್ರಾಚೀನ ನಾಣ್ಯಗಳ ಪ್ರದರ್ಶನ ನಡೆಯಿತು. ಪ್ರದರ್ಶನವನ್ನು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಿದರು.
ಮಡಿಕೇರಿಯ ಪತ್ರಿಕಾ ವಿತರಕ ಶಿವಪ್ರಸಾದ್ ಭಟ್ ತನ್ನ ತಾತನ ಕಾಲದಿಂದ ಸಂಗ್ರಹಿಸಿರುವ ವಿವಿಧ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಭಾರತದ ನಾಣ್ಯ, ನೋಟುಗಳು ಸೇರಿದಂತೆ ವಿವಿಧ ೧೮೫ ದೇಶದ ಕರೆನ್ಸಿಗಳು ಹಾಗೂ ಮೇಕೇರಿಯ ವಿಶ್ವಾಸ್ ಮೆನನ್ ೪೦ ವರ್ಷಗಳಿಂದ ಸಂಗ್ರಹಿಸಿರುವ ಬಗೆ ಬಗೆಯ ಅಂಚೆ ಚೀಟಿಗಳನ್ನು ಪ್ರದರ್ಶನಕ್ಕಿಟ್ಟಿದರು.
ಇಲಾಖೆಯ ಅಕ್ಯೂರೇಟರ್ ರೇಖಾ ಸೇರಿದಂತೆ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.