ಮುಳ್ಳೂರು, ನ. ೨೫: ಸಮೀಪದ ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ಜೀರ್ಣೋದ್ಧಾರಿತ ನೂತನ ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ನೂತನ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು.
ತಾ. ೨೨ ರಂದು ದೇವಾಲಯದಲ್ಲಿ ಕಲಶ ಸ್ಥಾಪನೆ ನೆರವೇರಿಸಿ, ಗಣಪತಿ ಹೋಮ, ದಿಕ್ಪಾಲಕ ಹೋಮ, ಸಹಸ್ರ ನಾಮ ಪಾರಾಯಣ, ಪೂರ್ವಕ ಹವನ, ದುರ್ಗಾ ಸಪ್ತಶತಿ, ಪಾರಾಯಣ, ಜಯಾದಿ ಹೋಮ, ನವಗ್ರಹ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀಕಂಠ ಶಾಸ್ತಿç ಮಲ್ಲೇಶ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಗ್ರಾಮದ ಮುಖಂಡ ಎಂ.ಇ. ವೆಂಕಟೇಶ್ ಹಾಜರಿದ್ದರು.