ಮಡಿಕೇರಿ, ನ. ೨೫: ಪ್ರಸ್ತುತ ದಿನ ಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಭರದಲ್ಲಿ ಮಾತೃಭಾಷೆಯನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಪೊಮ್ಮಕ್ಕಡ ಪರಿಷತ್‌ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಮಕ್ಕಳಲ್ಲಿ ಭಾಷೆ, ಸಂಸ್ಕöÈತಿ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಬೇಕು ಎಂದು ಕರೆ ನೀಡಿದ್ದಾರೆ.

ವೀರಾಜಪೇಟೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮತ್ತು ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜ್‌ನ ಸಭಾಂ ಗಣದಲ್ಲಿ ನಡೆದ ವಿಚಾರ ಮಂಡನೆ, ಸನ್ಮಾನ ಹಾಗೂ "ನಾಡ ಕೊಡಗ್" ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಭಾಷೆ, ಕಲೆ, ಜನಪದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವುದು ಮಹಿ ಳೆಯ ಪ್ರಮುಖ ಪಾತ್ರವಾಗಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಪದ್ಧತಿ ಪರಂಪರೆಯನ್ನೆ ಮರೆಯುತ್ತಿದ್ದಾರೆ. ತಮ್ಮ ನೆಲವನ್ನು ಇತರರಿಗೆ ಮಾರಿ ಮಣ್ಣಿನ ಸಂಬAಧವನ್ನು ಕಳೆದುಕೊಳ್ಳು ತ್ತಿರುವುದು ವಿಪರ್ಯಾಸ ಎಂದರು.

ಪೋಷಕರು ಪಾಶ್ಚಿಮಾತ್ಯ ಭಾಷೆಗೆೆ ಆದ್ಯತೆ ನೀಡದೆ ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದರೆ ನಿರಂತರ ಅನುಕರಣೆ ಯಿಂದ ಸಂಸ್ಕೃತಿ, ಆಚಾರ, ವಿಚಾರ, ಶೌರ್ಯ, ಸಾಹಸವನ್ನು ತಿಳಿದುಕೊಳ್ಳು ತ್ತಾರೆ ಎಂದರು.

ಇAದು ಸಾಮಾಜಿಕ ಕಟ್ಟುಪಾಡು ಗಳು ಸಡಿಲಗೊಂಡಿದೆ, ಐನ್‌ಮನೆಗಳು ನಾಶವಾಗುತ್ತಿವೆ. ಸಂಸ್ಕೃತಿ ಎಂಬುದು ನಿಧಿ ಇದ್ದಂತೆ, ಕೊಡವರಿಗೆ ಕೊಡವ ಸಂಸ್ಕೃತಿಯೇ ಆಧಾರ. ನಮ್ಮದು ಜಗ ಮೆಚ್ಚಿದ ಸಂಸ್ಕೃತಿ, ಅದನ್ನು ರಕ್ಷಣೆ ಮಾಡಿ ಮುಂದಿನ ಯುವ ಪೀಳಿಗೆಗೆ ಉಳಿಸ ಬೇಕು. ಭಾಷೆ, ಸಾಹಿತ್ಯ, ಸಂಸ್ಕೃತಿ ಮೂಲ ಸ್ಥಾನವೇ ಮನೆ. ಬೇರೆ ಭಾಷೆಗಳನ್ನು ಕಲಿಯಲು ಬೇಕಾದಷ್ಟು ಅವಕಾಶಗ ಳಿವೆ. ಆದರೆ ಮಾತೃಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು ಎಂದು ರಾಣು ಅಪ್ಪಣ್ಣ ಕರೆ ನೀಡಿದರು.

ನಿರ್ಮಾಪಕ, ನಿರ್ದೇಶಕ, ನಟ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಬರೆದಿರುವ ಕೊಡವ ಮಕ್ಕಡ ಕೂಟದ ೭೬ನೇ ಪುಸ್ತಕ "ನಾಡ ಕೊಡಗ್" ನ್ನು ಬಿಡುಗಡೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಎಂ.ಎ.ಕೊಡವ ಉಪನ್ಯಾಸಕ ಬಾಚರಣಿಯಂಡ ಅಪ್ಪಣ್ಣ, ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ಬೆಳೆದಿದ್ದು, ಬರಹಗಾರರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಓದುಗರ ಸಂಖ್ಯೆ ಕಡಿಮೆಯಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ಪುಸ್ತಕವನ್ನು ಹೆಚ್ಚು ಕೊಂಡುಕೊಳ್ಳುವ ಮೂಲಕ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಾಹಿತ್ಯ ಬೆಳೆಯಬೇಕು, ಕೊಡವಾಮೆಯನ್ನು ಬೆಳೆಸಬೇಕು ಎಂದ ಅವರು, ಕೊಡವ ಎಂ.ಎ. ವಿದ್ಯಾರ್ಥಿಗಳು ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿ, ಕೊಡವ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಾಹಿಸಿದ್ದು, ಮುಂದಿನ ದಿನಗ ಳಲ್ಲಿ ಸಾಹಿತ್ಯ ಲೋಕದ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಮಾತ ನಾಡಿ, ಕಾಲೇಜ್‌ನಲ್ಲಿ ಎಂ.ಎ.ಕೊಡವ ಪ್ರಾರಂಭವಾದ ನಂತರ ಗಮನಾರ್ಹ ಬದಲಾವಣೆಯಾಗುತ್ತಿದೆ. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಉತ್ಸಾಹದಿಂದ ಪುಸ್ತಕಗಳನ್ನು ಅನಾವ ರಣಗೊಳಿಸಲಾಗಿದ್ದು, ಇದೇ ಮೊದಲ ಬಾರಿಗೆ ಕೃತಿ ರಚಿಸಿ ಪದವಿ ಪಡೆದಿರು ವುದು ಶ್ಲಾಘನೀಯ. ಇದು ಶೈಕ್ಷಣಿಕ ಇತಿ ಹಾಸದಲ್ಲಿ ಉತ್ತಮ ಸಾಧನೆ ಎಂದರು.

ಕೊಡವ ಎಂ.ಎ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ, ಕಾರ್ಯಪ್ಪ ಕಾಲೇಜ್‌ನಲ್ಲಿ ಎಂ.ಎ ಕೊಡವ ಪದವಿ ಯನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿಸಿಕೊಂಡಿದ್ದಾರೆ. ಪುಸ್ತಕ ರಚಿಸಿ ಬಿಡುಗಡೆ ಮಾಡುವ ಮೂಲಕ ಯುವಕ, ಯುವತಿಯರಿಗೆ ಮಾದರಿ ಯಾಗಿದ್ದಾರೆ. ಕೊಡವ ಸಾಹಿತ್ಯ, ಭಾಷೆ ಹಾಗೂ ಬರಹವನ್ನು ಬೆಳೆಸಲು ಎಲ್ಲರು ಮುಂದಾಗಬೇಕು ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಎಂ.ಎ ಕೊಡವ ವಿಭಾಗಕ್ಕೆ ಸೇರುವಂತೆ ಮನವಿ ಮಾಡಿದ ಅವರು, ಕೊಡವ ಎಂ.ಎ ನಂತರ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದೆ ಎಂದು ತಿಳಿಸಿದರು.

“ನಾಡ ಕೊಡಗ್” ಪುಸ್ತಕದ ಬರಹಗಾರ, ನಿರ್ಮಾಪಕ, ನಿರ್ದೇಶಕ, ನಟ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಪುಸ್ತಕದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ನಿರಂತರ ಮೊಬೈಲ್ ಬಳಕೆಯಿಂದ ಹೊರ ಬಂದು ಕಲೆ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡ ಬೇಕು, ಹೆಚ್ಚು ಹೆಚ್ಚು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು.

ಕೊಡವ ಎಂ.ಎ.ವಿದ್ಯಾರ್ಥಿ ಐಚಂಡ ರಶ್ಮಿ ಮೇದಪ್ಪ “ನಂಗಡ ಮಕ್ಕಳ ಸಂಸ್ಕಾರವAತAಗಳಾಯಿತ್ ಬೊಳ್ತು ವಲ್ಲಿ ಅವ್ವಂಗಡ ಪಾತ್ರ” ಎಂಬ ನಾಣಯ್ಯ ಮಾತನಾಡಿ, ಕಾರ್ಯಪ್ಪ ಕಾಲೇಜ್‌ನಲ್ಲಿ ಎಂ.ಎ ಕೊಡವ ಪದವಿ ಯನ್ನು ವಿದ್ಯಾರ್ಥಿಗಳು ಸದುಪ ಯೋಗಪಡಿಸಿಕೊಂಡಿದ್ದಾರೆ. ಪುಸ್ತಕ ರಚಿಸಿ ಬಿಡುಗಡೆ ಮಾಡುವ ಮೂಲಕ ಯುವಕ, ಯುವತಿಯರಿಗೆ ಮಾದರಿ ಯಾಗಿದ್ದಾರೆ. ಕೊಡವ ಸಾಹಿತ್ಯ, ಭಾಷೆ ಹಾಗೂ ಬರಹವನ್ನು ಬೆಳೆಸಲು ಎಲ್ಲರು ಮುಂದಾಗಬೇಕು ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಎಂ.ಎ ಕೊಡವ ವಿಭಾಗಕ್ಕೆ ಸೇರುವಂತೆ ಮನವಿ ಮಾಡಿದ ಅವರು, ಕೊಡವ ಎಂ.ಎ ನಂತರ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದೆ ಎಂದು ತಿಳಿಸಿದರು.

“ನಾಡ ಕೊಡಗ್” ಪುಸ್ತಕದ ಬರಹಗಾರ, ನಿರ್ಮಾಪಕ, ನಿರ್ದೇಶಕ, ನಟ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಪುಸ್ತಕದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ನಿರಂತರ ಮೊಬೈಲ್ ಬಳಕೆಯಿಂದ ಹೊರ ಬಂದು ಕಲೆ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡ ಬೇಕು, ಹೆಚ್ಚು ಹೆಚ್ಚು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು.

ಕೊಡವ ಎಂ.ಎ.ವಿದ್ಯಾರ್ಥಿ ಐಚಂಡ ರಶ್ಮಿ ಮೇದಪ್ಪ “ನಂಗಡ ಮಕ್ಕಳ ಸಂಸ್ಕಾರವAತAಗಳಾಯಿತ್ ಬೊಳ್ತು ವಲ್ಲಿ ಅವ್ವಂಗಡ ಪಾತ್ರ” ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು.

ಸನ್ಮಾನ : ಕೊಡವ ಎಂ.ಎ ವಿದ್ಯಾರ್ಥಿಗಳಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಲೆ.ಕರ್ನಲ್ ಬಿ.ಎಂ. ಪಾರ್ವತಿ, ಐಚಂಡ ರಶ್ಮಿ ಮೇದಪ್ಪ, ಪುತ್ತರಿರ ವನಿತ ಮುತ್ತಪ್ಪ, ಬೊಳ್ಳಾರ್ ಪಂಡ ಎನ್.ಹೇಮಾವತಿ (ಜಾನ್ಸಿ), ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಚೌಂಡಿರ ಶಿಲ್ಪ ಪೊನ್ನಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಕರವಂಡ ಸೀಮಾ ಗಣಪತಿ ಅವರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಪೂವಿ ಮುತ್ತಪ್ಪ, ಖಜಾಂಚಿ ಮೂವೇರ ಧರಣಿ ಗಣಪತಿ ಉಪ ಸ್ಥಿತರಿದ್ದರು. ಎಂ.ಎ ವಿದ್ಯಾರ್ಥಿಗಳಾದ ಚಿಯಕ್‌ಪೂವಂಡ ಶ್ವೇತನ್ ಚೆಂಗಪ್ಪ ಪ್ರಾರ್ಥಿಸಿದರು. ಕರವಂಡ ಸೀಮಾ ಗಣಪತಿ ಸ್ವಾಗತಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿದರು. ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ತಿತೀರ ಊರ್ಮಿಳ ಸೋಮಯ್ಯ ವಂದಿಸಿದರು.

ಬೊಪ್ಪಂಡ ಶ್ಯಾಮ್ ಪೂಣಚ್ಚ ಅವರು ನಿರ್ದೇಶಕ ಪ್ರಕಾಶ್ ಕಾರ್ಯಪ್ಪ ಅವರ ವ್ಯಕ್ತಿ ಪರಿಚಯ ಮಾಡಿ, ವಿದ್ಯಾರ್ಥಿಗಳ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ನಂತರ ಕರವಂಡ ಪದ್ಮಿತಾ ತಂಗಮ್ಮ, ಕರವಂಡ ಕಲ್ಪಿತ ಮುತ್ತಮ್ಮ ನ್ಯತ್ಯ ಪ್ರದರ್ಶಿಸಿ ಗಮನ ಸೆಳೆದರು. ನಂತರ ಆಶುಭಾಷಣ ಸ್ಪರ್ಧೆ ನಡೆಯಿತು.