ಕೂಡಿಗೆ, ನ.೨೪ : ಇಲ್ಲಿಗೆ ಸಮೀಪದ ಮಾದಾಪಟ್ಟಣದಲ್ಲಿ ಕಾಡಾನೆಗಳ ಹಾವಳಿಯಿಂದ ತೆಂಗು, ಜೋಳ ಬೆಳೆ ನಾಶವಾಗಿದೆ.

ಬೆಂಡೆಬೆಟ್ಟದಿAದ ಮರಿಯಾನೆ ಯೊಂದಿಗೆ ಲಗ್ಗೆಯಿಟ್ಟ ಕಾಡಾನೆ ಮಾದಾಪಟ್ಟಣದ ಚಿಕ್ಲಿಹೊಳೆ ಎಡದಂಡೆ ನಾಲೆ ಪಕ್ಕದ ಡಿ.ಆರ್. ಪರಮೇಶ್ವರ ಎಂಬವರ ಜಮೀನಿನಲ್ಲಿ ಸೆಲ್ಲಿಂಗ್ ಮಾಡಿಟ್ಟಿದ್ದ ಜೋಳದ ಮೂಟೆಗಳನ್ನು ಎಳೆದಾಡಿ ನೆಲಸಮ ಮಾಡಿವೆ. ಅಲ್ಲದೆ ಮಾರಾಟಕ್ಕೆ ಸಿದ್ದಗೊಂಡಿದ್ದ ೫೦ ಕೆ.ಜಿಯ ೧೦ ರಿಂದ ೧೫ ಮೂಟೆಯಷ್ಟು ಜೋಳವನ್ನು ತಿಂದು ತುಳಿದು ನಾಶಗೊಳಿಸಿದೆ. ೧೦ ಕ್ಕೂ ಅಧಿಕ ತೆಂಗಿನ ಸಸಿಗಳನ್ನು ಹಾಗೂ ಜಮೀನಿನ ಬೇಲಿಯನ್ನು ಧ್ವಂಸ ಗೊಳಿಸಿದೆ ಎಂದು ರೈತ ಪರಮೇಶ್ವರಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮೀಪದ ಬಾಳೆ ಬೆಳೆ ಮತ್ತು ಭತ್ತದ ಗದ್ದೆಗಳಿಗೆ ದಾಳಿಮಾಡಿ ಅಪಾರ ಪ್ರಮಾಣದ ಬೆಳೆಯನ್ನು ನಷ್ಟ ಪಡಿಸಿವೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.