ಮುಳ್ಳೂರು, ನ. ೨೫: ಇತ್ತೀಚೆಗೆ ಬೆಂಗಳೂರಿನ ವಿದ್ಯಾನಗರದ ಕ್ರೀಡಾಂಗಣದಲ್ಲಿ ನಡೆದ ೧೭ ವರ್ಷದ ಬಾಲಕರ ವಿಭಾಗದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟಿನ ಗೌಡಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಸುಫೇಲ್, ಜಿ.ಆರ್. ಕೌಶಿಕ್ ಮತ್ತು ಸಂಜಯ್ ಮೈಸೂರು ವಿಭಾಗ ತಂಡವನ್ನು ಪ್ರತಿನಿಧಿಸಿದ್ದರು. ಪಂದ್ಯಾವಳಿಯಲ್ಲಿ ಮೈಸೂರು ವಿಭಾಗದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದೆ.
ಗೌಡಳ್ಳಿ ಪ್ರೌಢಶಾಲೆಯ ಬಾಲಕರು ಡಿ. ೨೫ ರಂದು ಅಂಡಮಾನ್ ಮತ್ತು ನಿಕೋಬಾರಿನ ಪೋರ್ಟ್ಬ್ಲೇರ್‌ನಲ್ಲಿ ನಡೆಯಲಿರುವ ರಾಷ್ಟç ಮಟ್ಟದ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ್ ಸ್ವಾಮೀಜಿ ಗೌಡಳ್ಳಿ ಬಿ.ಜಿ.ಎಸ್ ಪ್ರೌಢಶಾಲೆಗೆ ಆಗಮಿಸಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ನಂತರ ಮಾತನಾಡಿದ ಸ್ವಾಮೀಜಿ, ಗ್ರಾಮೀಣ ಭಾಗದ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದು ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು ಜಿಲ್ಲೆ, ರಾಜ್ಯ, ರಾಷ್ಟç ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕೀರ್ತಿ ತಂದುಕೊಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.