ಕುಶಾಲನಗರ, ನ. ೨೫: ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂಥÀರ್ ಗೌಡ ಅವರ ಜನಪರ ಕಾಳಜಿ ಸಹಿಸದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಮ್ಮ ಅಸಹಾಯ ಕತೆಯನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ. ಶಶಿಧರ್ ವ್ಯಂಗ್ಯವಾಡಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಕಾಮಗಾರಿಗಳನ್ನು ನಡೆಸಲು ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು. ಇದೀಗ ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ಜನರ ಎದುರು ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಪ್ರಸಕ್ತ ಶಾಸಕರು ಆದ್ಯತೆಯ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿ ದ್ದಾರೆ. ಜನರಿಗೆ ಅಗತ್ಯವಿಲ್ಲದ ಕಾಮ ಗಾರಿಯನ್ನು ಬದಲಾವಣೆ ಮಾಡು ವುದು ಅನಿವಾರ್ಯವಾಗಿದೆ. ಎಲ್ಲಾ ಕಾಮಗಾರಿಗಳು ಆಡಳಿತಾತ್ಮಕ ಪ್ರಕ್ರಿಯೆ ಯಂತೆ ನಡೆಯುತ್ತಿದೆ ಎಂದರು. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಯಾವುದೇ ರಾಜಿ ಇಲ್ಲದೆ ಮುಂದು ವರೆಯಲಿದೆ ಎಂದರು. ಕುಶಾಲನಗರ ಪಟ್ಟಣದಲ್ಲಿ ಈ ತಿಂಗಳ ೨೮ಕ್ಕೆ ನಮ್ಮ ಕ್ಲಿನಿಕ್ ಯೋಜನೆ ಲೋಕಾರ್ಪಣೆ ಗೊಳ್ಳÀಲಿದೆ ಎಂದು ಶಶಿಧರ್ ಮಾಹಿತಿ ನೀಡಿದರು.

ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಮಾಜಿ ಶಾಸಕ ರಂಜನ್ ಅವರು ಅಸಹಾಯಕರಾಗಿದ್ದಾರೆ. ಕುಶಾಲ ನಗರದಲ್ಲಿ ಒಳಚರಂಡಿ ಯೋಜನೆ, ಕಲಾಭವನ ಮತ್ತಿತರ ಯೋಜನೆ ಗಳು ದೂರ ದೃಷ್ಟಿಯ ಕೊರತೆ ಯಿಂದ ನೆನೆಗುದಿಗೆ ಬಿದ್ದಿದೆ ಎಂದರು.

ಈ ಸಂದರ್ಭ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರಾದ ದಿನೇಶ್, ಪ್ರಮುಖರಾದ ರೋಶನ್, ಶಿವಶಂಕರ್, ಕಿರಣ್ ಕುಮಾರ್ ಮತ್ತಿತರರು ಇದ್ದರು.