ಮಡಿಕೇರಿ, ನ. ೨೫: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವುಗಳನ್ನು ಸಮಾಜಕ್ಕೆ ಪರಿಚಯಿಸಿ ಪ್ರೋತ್ಸಾಹಿಸು ವಂತಾಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ. ಉಮಾ ಅವರು ಹೇಳಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯೂನಿಸೆಫ್, ಮಾನಸ, ಇಸಿಎಚ್‌ಓ ಹಾಗೂ ಸ್ಪಾö್ಯಡ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಅವಕಾಶ ವಂಚಿತ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಆಯೋಜಿಸ ಲಾಗಿದ್ದ ಬಾಲಮೇಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು. ಮಕ್ಕಳಲ್ಲಿರುವ ಪ್ರತಿಭೆ ಗಳನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿರಬೇಕು. ವಿದ್ಯಾಭ್ಯಾಸದಲ್ಲಿ ತೇರ್ಗಡೆ ಹೊಂದುವುದು ಮಾತ್ರ ಸಾಧನೆಯಲ್ಲ; ಜೀವನದಲ್ಲಿ ಗೆಲುವು ಸಾಧಿಸಬೇಕು. ಅದುವೇ ನಿಜವಾದ ಸಾಧನೆ ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರು ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿ ಸುವಲ್ಲಿ ಪ್ರತಿಯೊಬ್ಬರು ಪ್ರಮುಖ ಪಾತ್ರ ವಹಿಸಬೇಕೆಂದು ನುಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ಯಾಮ್ ಪ್ರಸಾದ್ ಅವರು ಮಾತನಾಡಿದ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದು ನುಡಿದರು.

ಮಕ್ಕಳ ಹಕ್ಕು ಭಾವನೆಗಳಿಗೆ ಸ್ಪಂದಿಸಬೇಕು

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡ ಮಾತನಾಡಿ,

(ಮೊದಲ ಪುಟದಿಂದ) ಪ್ರತಿಯೊಬ್ಬರು ಮಕ್ಕಳ ಹಕ್ಕು ಮತ್ತು ಭಾವನೆಗಳಿಗೆ ಸ್ಪಂದಿಸಬೇಕು.ಶಿಸ್ತಿನ ನೆಪವೊಡ್ಡಿ ಮಕ್ಕಳ ಹಕ್ಕು ಮತ್ತು ಭಾವನೆಗಳಿಗೆ ತಡೆಯೊಡ್ಡಬಾರದು ಎಂದು ಹೇಳಿದರು. ಮಕ್ಕಳು ಮಕ್ಕಳತನವನ್ನು ಅನುಭವಿಸಬೇಕು. ಗ್ರಾಮೀಣ ಆಟಗಳಾದ ಮರಕೋತಿ, ಕುಂಟೆಬಿಲ್ಲೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಇತರ ಮಕ್ಕಳ ಜೊತೆ ಬೆರೆಯಲು ಸಾಧ್ಯವಾಗಲಿದೆ. ಮಕ್ಕಳು ಮೊಬೈಲ್ ಬದಲಾಗಿ ಮಣ್ಣಿನಲ್ಲಿ ಆಟ ಆಟವಾಡಬೇಕು. ಇದರಿಂದ ಮಕ್ಕಳ ಚೈತನ್ಯ ಹೆಚ್ಚಾಗಲಿದೆ. ಜೊತೆಗೆ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ವಿಕಸನ ಸದೃಢಗೊಳ್ಳಲಿದೆ ಎಂದು ನಾಗಣ್ಣ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ್ ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವುದು ಅತಿಮುಖ್ಯ ಎಂದರು. ನಾವುಗಳೆಲ್ಲರೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿಕೊಂಡು ಮುಖ್ಯವಾಹಿನಿಗೆ ಬಂದಿದ್ದೇವೆ. ಅದೇ ರೀತಿ ಇಂದಿನ ಮಕ್ಕಳು ಸಹ ಹೆಚ್ಚಿನ ಶ್ರಮವಹಿಸಿ ಓದಿದರೆ, ಉತ್ತಮ ಭವಿಷ್ಯ ಕಾಣಬಹುದು. ಆ ನಿಟ್ಟಿನಲ್ಲಿ ಆಟದ ಜೊತೆ ಪಾಠಕ್ಕೂ ಹೆಚ್ವಿನ ಆದ್ಯತೆ ನೀಡಬೇಕು ಎಂದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶಾಮ್ ಪ್ರಸಾದ್ ಅವರು ಮಾತನಾಡಿ ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡದೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮಕ್ಕಳ ಜೊತೆ ಪೋಷಕರು ಆಟ -ಪಾಠದಲ್ಲಿ ಪಾಲ್ಗೊಂಡಾಗ ಮಕ್ಕಳ ಲವಲವಿಕೆ ಹೆಚ್ಚಾಗಲಿದೆ ಎಂದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಯುನಿಸೆಫ್ ವಿಭಾಗದ ಮಕ್ಕಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ. ನಿರಂಜನ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ಆ್ಯಂಟೋನಿ ಸಭಾಸ್ಟಿನ್, ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ, ಡಿವೈಎಸ್ಪಿ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರರು ಇದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಸ್ವಾಗತಿಸಿದರು, ಬಿಜು ನಿರೂಪಿಸಿದರು, ರೆನ್ನಿ ವಂದಿಸಿದರು. ಬಾಲಮೇಳ ಕಾರ್ಯಕ್ರಮಕ್ಕೆ ಉದ್ಘಾಟಕರೊಂದಿಗೆ ಮಕ್ಕಳು ಸೇರಿ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಜಯಶಂಕರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಾಲ ಮೇಳ ಕಾರ್ಯಕ್ರಮದಲ್ಲಿ ಬಾಲಕರ, ಬಾಲಕಿಯರ ಮಂದಿರ, ವಿವಿಧ ಆಶ್ರಮ ಶಾಲೆಯ ೨೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸಿAಹದ ಬಾಯಿಗೆ ಚೆಂಡು ಎಸೆಯುವುದು, ಬಾಸ್ಕೆಟ್ ಬಾಲ್, ಲಕ್ಕಿ ರಿಂಗ್ಸ್ ಸೇರಿದಂತೆ ೧೦ ಕ್ಕೂ ಹೆಚ್ಚು ಕ್ರೀಡಾಕೂಟಗಳು ನಡೆದವು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಿಂದ ಆಕರ್ಷಕವಾಗಿ ಮೂಡಿ ಬಂದವು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಸ್ತು ಪ್ರದರ್ಶನ ಏರ್ಪಡಿಸುವುದರ ಜೊತೆಗೆ ಮಕ್ಕಳಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.

ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನದ ಮಹತ್ವದ ಬಗ್ಗೆ ವಸ್ತು ಪ್ರದರ್ಶನ ಮಳಿಗೆ ಗಮನ ಸೆಳೆಯಿತು. ನೃತ್ಯ ಸ್ಪರ್ಧೆಯಲ್ಲಿ ಬಸವನಹಳ್ಳಿ ಆಶ್ರಮಶಾಲೆ ಹಾಗೂ ಬಾಲಕಿಯರ ಬಾಲಮಂದಿರ ಕೊಡಗು ತಂಡಗಳು ಪ್ರಥಮ ಬಹುಮಾನ ಪಡೆದರೆ, ಸರ್ಕಾರಿ ಬಾಲಕರ ಬಾಲಮಂದಿರ ತಂಡ ದ್ವಿತೀಯ ಸ್ಥಾನ ಪಡೆಯಿತು.