ಮಡಿಕೇರಿ, ನ. ೨೫: ಜಿಲ್ಲೆಯಲ್ಲಿ ಕಳೆದ ಹಲವು ಸಮಯಗಳಿಂದ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಕುತೂಹಲ ಜಿದ್ದಾಜಿದ್ದಿನ ಸ್ಪರ್ಧೆಯ ಮೂಲಕ ಏರ್ಪಟ್ಟಿದ್ದ ಸಹಕಾರ ಸಂಘಗಳ ಚುನಾವಣೆ ಇದೀಗ ಬಹುತೇಕ ಮುಕ್ತಾಯಗೊಂಡಿದೆ. ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಜಿಲ್ಲೆಯಲ್ಲಿನ ಹಲವು ಸಹಕಾರ ಸಂಘಗಳ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಸಂಘಗಳಿಗೆ ಚುನಾವಣೆ ನಡೆಸಬೇಕಾಗಿತ್ತು. ಸಹಕಾರ ಇಲಾಖೆಯ ಮೂಲಕ ಜೂನ್ ತಿಂಗಳಿನಿAದ ಡಿಸೆಂಬರ್ ತನಕ ಹಂತಹAತವಾಗಿ ವಿವಿಧ ಸಂಘಗಳಿಗೆ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಶಾಸಕರು ಬದಲಾಗಿದ್ದು, ಹಿಂದಿನ ಬಿಜೆಪಿ ಆಡಳಿತ ಅಂತ್ಯಗೊAಡ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಹೊಸ ಸಂಚಲನಕ್ಕೆ ಕಾರಣವಾಗಿತ್ತು. ಇದು ರಾಜಕೀಯ ಪಕ್ಷಗಳ ನಡುವಿನ ನೇರ ಚುನಾವಣೆ ಅಲ್ಲದಿದ್ದರೂ, ಪ್ರಸ್ತುತದ ಸನ್ನಿವೇಶದಲ್ಲಿ ರಾಜಕೀಯ ಪ್ರತಿಷ್ಠೆಯೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ತೆರೆಮರೆಯಲ್ಲಿ ರಾಜಕೀಯ ಲೆಕ್ಕಾಚಾರದಂತೆಯೇ ಚುನಾವಣಾ ಕಣಕ್ಕೆ ಇಳಿಯುವುದು ಸಹಜವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಚುನಾವಣೆಯೂ ಭಾರೀ ಮಹತ್ವ ಪಡೆಯುವಂತಾಗಿದೆ.

(ಮೊದಲ ಪುಟದಿಂದ) ೨೦೧೮ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಜಿಲ್ಲೆಯ ಸುಮಾರು ೧೦೨ ಸಂಘಗಳಿಗೆ ಚುನಾವಣೆ ನಡೆಯಬೇಕಿತ್ತು. ಹೆಚ್ಚಿನ ಸಂಘಗಳು ಗ್ರಾಮೀಣ ಭಾಗದಲ್ಲಿರುವುದರಿಂದ ವಿವಿಧ ಗ್ರಾಮಗಳಲ್ಲಿ ಈ ತನಕ ಚುನಾವಣಾ ಕಾವು ಕಂಡುಬAದಿತ್ತು. ಇದೀಗ ಜೂನ್‌ನಿಂದ ಈ ತನಕ ಒಟ್ಟು ೧೦೨ ಸಹಕಾರ ಸಂಘಗಳ ಪೈಕಿ ನಾಲ್ಕು ಸಂಘಗಳನ್ನು ಹೊರತುಪಡಿಸಿ ಇತರ ಸಂಘಗಳ ಚುನಾವಣೆ ಮುಕ್ತಾಯಗೊಂಡಿದೆ. ಚುನಾವಣೆ ಮುಗಿದಿರುವ ಬಹುತೇಕ ಸಂಘಗಳಿಗೆ ನೂತನ ಆಡಳಿತ ಮಂಡಳಿಯೂ ಈಗಾಗಲೇ ರಚನೆಗೊಂಡಿದೆ.

ಇದೀಗ ಎರಡು ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮಾತ್ರ ಬಾಕಿ ಉಳಿದಿದೆ. ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೂ ಚುನಾವಣೆ ನಡೆಯಬೇಕಿತ್ತಾದರೂ, ಇಲ್ಲಿ ತಾಂತ್ರಿಕ ಕಾರಣ ಹಾಗೂ ನಿಯಮವನ್ನು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಈ ಸಂಘದ ಚುನಾವಣೆ ಇನ್ನಷ್ಟೇ ನಿಗದಿಯಾಗಬೇಕಿದೆ. ಈ ಸಂಘದ ಅಧಿಕಾರಾವಧಿ ಮುಕ್ತಾಯ ವಾಗಿರುವುದರಿಂದ ಇಲ್ಲಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಉಳಿದಂತೆ ಅಧಿಕಾರ ಪೂರ್ಣಗೊಂಡಿದ್ದ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ೨೨ ಧವಸ ಭಂಡಾರಗಳು, ಎರಡು ಪಟ್ಟಣ ಸಹಕಾರ ಬ್ಯಾಂಕ್ ಸೇರಿದಂತೆ ಇತರೆ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಬರುವ ೧೮ ಸಹಕಾರ ಸಂಘಗಳಿಗೆ ಚುನಾವಣೆ ಪೂರ್ಣಗೊಂಡಿದೆ. ಮುಂದಿನ ಜನವರಿ ತಿಂಗಳಿನಲ್ಲಿ ೧ ಪಟ್ಟಣ ಸಹಕಾರ ಬ್ಯಾಂಕ್, ೧ ಮಹಿಳಾ ಸಂಘ, ೧ ಹಾಲು ಉತ್ಪಾದಕರ ಸಂಘ ಸೇರಿದಂತೆ ಒಟ್ಟು ೫ ಸಂಘಗಳ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಸಂಘಗಳಿಗೆ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಚುನಾವಣೆ ನಡೆಸಬೇಕಾಗಿದೆ ಎಂದು ಸಹಕಾರ ಇಲಾಖೆಯ ಮೂಲಗಳು ತಿಳಿಸಿವೆ. ಇದೀಗ ಮುಂದಿನ ಮೇ ತಿಂಗಳಿನಲ್ಲಿ ಸಹಕಾರ ಸಂಘಗಳ ಪೈಕಿ ಪ್ರಮುಖವಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಡಿ.ಸಿ.ಸಿ.) ನೂತನ ಆಡಳಿತ ಮಂಡಳಿಗೆ ಎದುರಾಗಲಿರುವ ಚುನಾವಣೆಯತ್ತ ಕುತೂಹಲ ಆರಂಭಗೊAಡಿದೆ.

ಡಿ.ಸಿ.ಸಿ. ಬ್ಯಾಂಕ್‌ಗೆ ಪಕ್ಷ ಆಧಾರಿತವಾಗಿ ಚುನಾವಣೆ ನಡೆಯಲಿದ್ದು, ಈತನಕ ನಡೆದಿರುವ ವಿವಿಧ ಸಹಕಾರ ಸಂಘಗಳ ಚುನಾವಣೆಯ ಫಲಿತಾಂಶ ಇದರ ಮೇಲೆ ಪರಿಣಾಮ ಬೀರಲಿರುವುದರಿಂದ ಇದು ಕೌತುಕವಾಗಲಿದೆ.