ಸೋಮವಾರಪೇಟೆ, ನ. ೨೪: ರೈತ ಬಾಂಧವರು ಖಡ್ಡಾಯವಾಗಿ ಈಖUIಖಿS ತಂತ್ರಾAಶದಲ್ಲಿ ತಮ್ಮ ಕೃಷಿ ಜಮೀನಿನ ನೋಂದಣಿ ಮಾಡಿಸಿ, ರೈತರ ಗುರುತಿನ ಚೀಟಿ ಪಡೆಯಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿಗಾಗಿ ತಮ್ಮ ಜಮೀನಿನ ಪಹಣಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಮೊಬೈಲ್ ನಂಬರ್ ಹಾಗೂ ಎಸ್.ಸಿ/ಎಸ್.ಟಿ ಜಾತಿಗೆ ಸೇರಿದ ರೈತರು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಿ, ತಾ. ೩೦ರೊಳಗೆ ಸಮೀಪದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕಿದೆ. ತಮಗೆ ಸಂಬAಧಿಸಿದ ಎಲ್ಲಾ ಜಮೀನುಗಳ ಸರ್ವೆ ನಂಬರ್ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ಸ್ಥಳದಲ್ಲಿಯೇ ಪರಿಶೀಲಿಸಿಕೊಳ್ಳಬೇಕು.
ಜಂಟಿ ಖಾತೆದಾರರು ಎಲ್ಲರೂ ಪ್ರತ್ಯೇಕವಾಗಿ ನೋಂದಾವಣೆ ಮಾಡಿಸಬೇಕಿದೆ. ಮಾಡಿಸದೇ ಇದ್ದಲ್ಲಿ ಸರ್ಕಾರÀದಿಂದ ರೈತರಿಗೆ ನೀಡಲಾಗುವ ಬೆಳೆ ವಿಮೆ, ಬರ ಪರಿಹಾರ ಸೇರಿದಂತೆ ಯಾವುದೇ ಯೋಜನೆಗಳು ರೈತರಿಗೆ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.