ಶನಿವಾರಸಂತೆ, ನ. ೨೪: ರೇಬಿಸ್ ಕಾಯಿಲೆ ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಕಾಯಿಲೆಯಾಗಿದ್ದು, ಭಯಾನಕ ಕಾಯಿಲೆಗಳಲ್ಲಿ ಒಂದಾಗಿದೆ. ಸೋಮವಾರಪೇಟೆ ತಾಲೂಕು ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಸ್.ವಿ. ಬದಾಮಿ ಮಾತನಾಡಿದರು.
ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ೭ನೇ ವರ್ಷದ ಉಚಿತ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ನಾಯಿ ರೇಬಿಸ್ ನಿಯಂತ್ರಣಾ ಲಸಿಕೆ ಹಾಕುವ ಶಿಬಿರದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಈ ಕಾಯಿಲೆ ಶೇ. ೩೬ ರಷ್ಟಿದ್ದು ಜನರಲ್ಲಿ ಅರಿವು ಕಡಿಮೆ. ಜಾಗೃತಿ ಆಂದೋಲನದ ಮೂಲಕ ಅರಿವು ಮೂಡಿಸಬೇಕು. ಈ ಕಾಯಿಲೆಯಿಂದ ೧೫ ವರ್ಷದೊಳಗಿನ ಮಕ್ಕಳು ಸಾಯುವುದು ಜಾಸ್ತಿ. ಸಾಕು ನಾಯಿ, ಬೆಕ್ಕುಗಳಿಗೆ ಚುಚ್ಚುಮದ್ದು ಹಾಕಿಸುವುದರಿಂದ ಹಾಗೂ ಪ್ರತಿ ತಿಂಗಳು ೩ ಹಂತದಲ್ಲಿ ಹುಳು ನಿವಾರಣೆ ಔಷಧಿ ನೀಡುವುದರಿಂದ ರೇಬಿಸ್ ತಡೆಗಟ್ಟಬಹುದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಕೇಶವ್ ಮಾತನಾಡಿ, ಸಸ್ತನಿಗಳಲ್ಲಿ ಹರಡುವ ಕಾಯಿಲೆ ಭಾರತದಲ್ಲಿ ವೈಯಕ್ತಿಕವಾಗಿ ಹರಡುತ್ತದೆ. ತಡೆದುಕೊಳ್ಳಲಾಗದಷ್ಟು ಅಸಹನೀಯವಾಗಿರುವ ರೇಬಿಸ್ ಕಾಯಿಲೆ ಬಗ್ಗೆ ಜಾಗೃತೆ ಮುಖ್ಯ.
ಮುಖ್ಯ ಅತಿಥಿಗಳಾಗಿ ಉಪ ರೊಟೇರಿ ಜಿಲ್ಲಾಧಿಕಾರಿ ಲಿಖಿತ್ ಮಾತನಾಡಿದರು. ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ಎ.ಹೆಚ್. ಚಂದ್ರಕಾAತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರಸಂತೆ ಪಶು ಚಿಕಿತ್ಸಾಲಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಎಂ. ಸತೀಶ್ ಕುಮಾರ್, ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹೆಚ್.ವಿ. ದಿವಾಕರ್, ವಲಯ ಸೇನಾನಿ ಹೆಚ್.ಎಂ. ದಿವಾಕರ್, ಸಂಸ್ಥೆ ಕಾರ್ಯದರ್ಶಿ ಸೋಮಶೇಖರ್ ಇನ್ನಿತರರು ಉಪಸ್ಥಿತರಿದ್ದರು.
ಪಶು ಚಿಕಿತ್ಸಾಲಯದ ಮೇಲ್ವಿಚಾರಕ ಸರ್ವರ್ ಪಾಶ, ಸಿಬ್ಬಂದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯ ನಿರ್ವಹಿಸಿದರು.