ಮಡಿಕೇರಿ, ನ. ೨೫: ತಲಕಾವೇರಿಗೆ ತೆರಳಿ ದರ್ಶನ ಮುಗಿಸಿ ಮೈಸೂರಿಗೆ ತೆರಳುವ ಸಂದರ್ಭ ಭಕ್ತರಿದ್ದ ಟೆಂಪೋ ಟ್ರಾವೆಲರ್ (ಟಿ.ಟಿ) ವಾಹನ ಮಗುಚಿ ಈರ್ವರು ಗಂಭೀರಗೊAಡು, ವಾಹನದಲ್ಲಿದ್ದ ಚಾಲಕ ಸಹಿತ ೮ ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿAದ ಜಿಲ್ಲೆಗೆ ಆಗಮಿಸಿದ ಒಂದೇ ಕುಟುಂಬದ ೯ ಮಂದಿ ಮೊದಲು ತಲಕಾವೇರಿಗೆ ತೆರಳಿ ಬಳಿಕ ಮಡಿಕೇರಿ ಮೂಲಕ ಮೈಸೂರಿಗೆ ತೆರಳುವ ಮಡಿಕೇರಿ ನಗರದ ಹೊರವಲಯದ ಇಬ್ಬನಿ ರೆಸಾರ್ಟ್ ಸಮೀಪ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡಿದೆ. ತಕ್ಷಣ ಗಾಯಾಳುಗಳನ್ನು ಆ್ಯಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಗಾಯಿತ್ರಿ ಹಾಗೂ ಲೋಕೇಶ್ ಎಂಬವರ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.