*ಗೋಣಿಕೊಪ್ಪಲು, ನ. ೨೫: ಗೋಣಿಕೊಪ್ಪಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ ನಿಯಮಿತ ಇದರ ೨೦೨೩-೨೦೨೮ನೇ ಸಾಲಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಳವಂಡ ಕೆ. ಅರವಿಂದ್, ನಿರ್ದೇಶಕರುಗಳಾಗಿ ಕಿರಿಯಮಾಡ ಯು. ಅರುಣ್ ಪೂಣಚ್ಚ, ಸಣ್ಣುವಂಡ ಎಂ. ವಿಶ್ವನಾಥ್, ಎಸ್.ಎಸ್. ಸುರೇಶ್, ಕಡೇಮಾಡ ಸುನಿಲ್ ಮಾದಪ್ಪ, ಚೆಂದ್ರಿಮಾಡ ಸಿ. ಕಾಳಯ್ಯ, ಬಾನಂಡ ಎನ್. ಪೃಥ್ವಿ, ಚೇಂದAಡ ಸುಮಿ ಸುಬ್ಬಯ್ಯ ಹಾಗೂ ಪುಲಿಯಂಡ ಶೋಭಾ ಕುಟ್ಟಪ್ಪ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.