ವರದಿ : ಪುತ್ತರಿರ ಕರುಣ್‌ಕಾಳಯ್ಯ

ಚೆಟ್ಟಳ್ಳಿ, ನ. ೨೪: ಕಾರ್ಯಾಚರಣೆ ನಡೆಸುವ ಸಂದರ್ಭ ಕಾಡಾನೆ ದಾಳಿಯಿಂದ ಉಸಿರು ಚೆಲ್ಲಿದ್ದ ಅರಣ್ಯ ಇಲಾಖೆಯ ಕ್ಷಿಪ್ರ ಸ್ಪಂದನ ಪಡೆ (ಆರ್.ಆರ್.ಟಿ) ಸಿಬ್ಬಂದಿ ಕುಟುಂಬಕ್ಕೆ ೨ ತಿಂಗಳು ಕಳೆದರೂ ಪರಿಹಾರ ದೊರೆತಿಲ್ಲ. ಪರಿಹಾರ ಮೊತ್ತ ಪಾವತಿಗೆ ಕೆಲ ಗೊಂದಲಗಳು ತಡೆಯಾಗಿದ್ದು, ಕುಟುಂಬಸ್ಥರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸೆಪೆÀ್ಟಂಬರ್ ೪ ರಂದು ಕೆದಕಲ್‌ನಲ್ಲಿ ನಡೆದ ಅರಣ್ಯ ಇಲಾಖೆಯ ಕಾಡಾನೆ ಕಾರ್ಯಾಚರಣೆ ಸಂದರ್ಭ ಸಿಬ್ಬಂದಿ ಗಿರೀಶ್ (೩೫) ಮೃತಪಟ್ಟಿದ್ದರು. ಸರಕಾರದ ಮಾರ್ಗಸೂಚಿ ಅನುಸಾರ ರೂ.೧೫ ಲಕ್ಷ ಪರಿಹಾರ ದೊರೆಯಬೇಕಾಗಿತ್ತು. ಆದರೆ, ಯಾವುದೇ ಪರಿಹಾರ ಬಂದಿಲ್ಲ.

ಮೂಲತಃ ಮಾಲ್ದಾರೆಯ ಅಂಚೆತಿಟ್ಟು ನಿವಾಸಿ ಗಿರೀಶ್ ಕಳೆದ ೮ ವರ್ಷಗಳಿಂದ ಕುಶಾಲನಗರ ವಲಯದ ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆ. ೪ ರಂದು ಸುಂಟಿಕೊಪ್ಟ ಸಮೀಪದ ಕೆದಕಲ್‌ನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಕಾಡಿಗಟ್ಟುವ ಸಂದರ್ಭ ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಮುಂದಾದಾಗ ಇತರೆ ಸಿಬ್ಬಂದಿಗಳು ತಪ್ಪಿಸಿಕೊಂಡು ಓಡಿ ಜೀವ ಉಳಿಸಿಕೊಂಡಿದ್ದರು. ಗಿರೀಶ್ ಮಾತ್ರ ಕಾಡಾನೆಯ ದಾಳಿಗೆ ಸಿಲುಕಿ ಎದೆ ಹಾಗೂ ದೇಹದ ಭಾಗದ ತುಳಿತದಿಂದ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕುಟುಂಬಕ್ಕೆ ರೂ. ೧ ಲಕ್ಷ ನೀಡಿದ್ದರು. ಮಡಿಕೇರಿ ಶಾಸಕ ಮಂಥರ್ ಗೌಡ ರೂ.೧೦ ಸಾವಿರ ನೆರವು ನೀಡಿದರು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಪರಿಹಾರ ಇದುವರೆಗೂ ಕುಟುಂಬದ ಕೈ ಸೇರಿಲ್ಲ. ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ತಕ್ಷಣ ಮೃತ ಕುಟುಂಬಕ್ಕೆ ರೂ. ೧೫ ಲಕ್ಷ ಪರಿಹಾರ ನೀಡಬೇಕೆಂಬ ಆದೇಶವಿದ್ದರೂ ಕಳೆದ ಎರಡು ತಿಂಗಳಿAದ ಗಿರೀಶನ ಕುಟುಂಬ ಪರಿಹಾರ ಹಣಕ್ಕಾಗಿ ಅಲೆಯುತ್ತಿದೆ.

ಪರಿಹಾರ ಮೊತ್ತ ಯಾರಿಗೆ? ಎಂಬ ಗೊಂದಲ

ಅವಿವಾಹಿತನಾಗಿರುವ ಮೃತ ಗಿರೀಶನು ಕಿರಿಯ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಓರ್ವ ಸಹೋದರಿ ನಾಲ್ವರು ಸಹೋದರರ ಪೈಕಿ ಒಬ್ಬ ಸಹೋದರ ಮರಣಹೊಂದಿದ್ದಾರೆ. ಅವರಿಗೆ ಪತ್ನಿ ಹಾಗೂ ಮಕ್ಕಳಿದ್ದಾರೆ. ಮೃತನ ಪರಿಹಾರ ಹಣ ಪಡೆಯಲು ಕುಟುಂಬದ ಎಲ್ಲರೂ ಅರ್ಹರಾಗಿದ್ದು, ಅರಣ್ಯ ಇಲಾಖೆ ಯಾರಿಗೆ ಹಣ ನೀಡುವುದು? ಎಂಬ ಗೊಂದಲದಿAದಲೂ ಹಣ ಪಾವತಿ ವಿಳಂಬಕ್ಕೆ ಕಾರಣವಾಗಿದೆ.

ಮೃತ ಗಿರೀಶ್‌ನ ಸಹೋದರ ರಾಮು ಅವರÀ ಖಾತೆಗೆ ಹಣ ನೀಡಿ ಎಲ್ಲರೂ ಸಮಪಾಲು ಮಾಡಿಕೊಳ್ಳುವಂತೆ ಒಪ್ಪಿಗೆ ಪತ್ರ ನೀಡಿದರೆ ಪರಿಹಾರ ಹಣ ಪಾವತಿಸಲು ಸಾಧ್ಯವೆಂಬುದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮೃತಪಟ್ಟ ಸಹೋದರನ ಮಕ್ಕಳ ಸಹಿ ಇಲ್ಲದ ಕಾರಣಕ್ಕಾಗಿ ಪರಿಹಾರದ ಹಣ ಖಾತೆಗೆ ಜಮೆಯಾಗಲಿಲ್ಲ.

ಗಿರೀಶನ ಕುಟುಂಬ ಓಡಾಡಲು ಸಾಧ್ಯವಾಗದ ಹಿನ್ನೆಲೆ ಸಂಬAಧಿ ಮಾಧ ಅರಣ್ಯ ಇಲಾಖೆಯ ಪರಿಹಾರಕ್ಕಾಗಿ ಪಂಚಾಯಿತಿ ಸದಸ್ಯರೊಬ್ಬರ ಸಹಾಯದಿಂದ ನೆರವಾಗಿದ್ದಾರೆ. ಈಗಾಗಲೇ ರೂ.೧ ಲಕ್ಷ ಅರಣ್ಯ ಇಲಾಖೆ ನೀಡಿದ ಹಣವನ್ನು ಕಳೆದು ರೂ.೧೪ ಲಕ್ಷ ಹಣ ದೊರೆಯಬೇಕಾಗಿದೆ.