ಮಡಿಕೇರಿ, ನ. ೨೨: ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ, ಗ್ರೇಡ್-೩ ವೃಂದದ ೧ ಹಿಂಬಾಕಿ (ಬ್ಯಾಕ್‌ಲಾಗ್) ಹುದ್ದೆ ಸೇರಿದಂತೆ ಒಟ್ಟು ೨ ಹುದ್ದೆಗಳು, ಬೆರಳಚ್ಚುಗಾರರ ವೃಂದದ ೧೭ ಹುದ್ದೆಗಳು, ನಕಲು-ಬೆರಳಚ್ಚುಗಾರರ ವೃಂದದ ೭ ಹುದ್ದೆಗಳು, ಆದೇಶಿಕ ಜಾರಿಕಾರ ವೃಂದದ ೮ ಹುದ್ದೆಗಳು ಹಾಗೂ ಜವಾನ-ಸೇವಕ ವೃಂದದ ೩೦ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ hಣಣಠಿs://ಞoಜಚಿgu.ಜಛಿouಡಿಣs.gov.iಟಿ/ಟಿoಣiಛಿe-ಛಿಚಿಣegoಡಿಥಿ/ಡಿeಛಿಡಿuiಣmeಟಿಣs/ ರಲ್ಲಿ ನೀಡಲಾದ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಡಿಸೆಂಬರ್, ೧೦ ರ ರಾತ್ರಿ ೧೧.೫೯ ಗಂಟೆಯೊಳಗೆ ಸಲ್ಲಿಸಬೇಕು ಮತ್ತು ಪೂರ್ಣ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸಲು ಡಿಸೆಂಬರ್, ೧೧ ಕೊನೆಯ ದಿನವಾಗಿದೆ. ಆನ್‌ಲೈನ್ ಹೊರತುಪಡಿಸಿ, ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಮಡಿಕೇರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶಾಮ್ ಪ್ರಸಾದ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ವಿಕಲಚೇತನರಿಗೆ ಯೋಜನೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ೭ ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ. (ನೇರ ನಗದು ವರ್ಗಾವಣೆ) ಆನ್‌ಲೈನ್ ವೇದಿಕೆ ತಂತ್ರಾAಶದಡಿ ಅಳವಡಿಸಲಾಗಿರುತ್ತದೆ. ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ೭ ಯೋಜನೆಗಳಿಗೆ ೨೦೨೩-೨೪ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್‌ಲೈನ್ ಮೂಲಕ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ/Sevಚಿsiಟಿಜhu/ಆeಠಿಚಿಡಿಣmeಟಿಣSeಡಿviಛಿesಏಚಿಟಿಟಿಚಿಜಚಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ ೧೫ ರವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ವಿಕಲಚೇತನರು ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ೦೩ ತಾಲೂಕಿನ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲೂಕಿನ ರಾಜೇಶ್ ೮೦೭೩೧೯೨೯೧೪, ಸೋಮವಾರಪೇಟೆ ತಾಲೂಕಿನ ಹರೀಶ್ ಟಿ.ಆರ್. ೯೦೦೮೬೮೫೧೨೯ ಹಾಗೂ ವೀರಾಜಪೇಟೆ ತಾಲೂಕಿನ ಪ್ರಥನ್ ಕುಮಾರ್ ಸಿ.ಬಿ. ೯೯೦೦೮೮೩೬೫೪ ನ್ನು ಸಂಪರ್ಕಿಸುವAತೆ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ. ೦೮೨೭೨-೨೯೫೮೨೯ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.