ಮುಳ್ಳೂರು, ನ. ೨೨: ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ದಿನವನ್ನು ಆಚರಿಸಲಾಯಿತು. ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಗಂಥಾಲಯ ಸಪ್ತಾಹವನ್ನು ಉದ್ಘಾಟಿಸಿದರು.

ದಿನದ ಮಹತ್ವ ಕುರಿತು ದುಂಡಳ್ಳಿ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ. ದಿವ್ಯ ಮಾತನಾಡಿ, ಗ್ರಂಥಾಲಯ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಗ್ರಂಥಾಲಯಗಳಲ್ಲಿ ನ. ೧೪ ರಿಂದ ೨೦ ರವರೆಗೆ ಗ್ರಂಥಾಲಯ ಸಪ್ತಾಹವನ್ನು ವಾರ್ಷಿಕ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿದೆ ಎಂದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಗ್ರಂಥಾಲಯ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ಗ್ರಂಥಾಲಯಗಳಲ್ಲಿ ದೊರೆಯುವ ಪುಸ್ತಕ, ಕೃತಿಗಳನ್ನು ಓದುವುದರ ಜೊತೆಯಲ್ಲಿ ಡಿಜಿಟಲ್ ಕೇಂದ್ರದಲ್ಲಿರುವ ಮಾಹಿತಿ ಇನ್ನಿತ್ತರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಧನು, ಅಂಗನವಾಡಿ ಶಾಲಾ ಶಿಕ್ಷಕಿ ಅಶ್ವಿನಿ ಪ್ರಮುಖರಾದ ತಮ್ಮೇಗೌಡ ವಿದ್ಯಾರ್ಥಿಗಳು, ಓದುಗರು ಹಾಜರಿದ್ದರು.