ಕೂಡಿಗೆ, ನ. ೨೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಎಸ್.ಡಿ.ಪಿ.ಕೆ. ಫ್ರೆಂಡ್ಸ್ ಇವರ ವತಿಯಿಂದ ರಂಜನ್ ಅವರ ಜ್ಞಾಪಕಾರ್ಥವಾಗಿ ಮೊದಲನೇ ವರ್ಷದ ಹೆಚ್.ವಿ.ಎಲ್. ವಾಲಿಬಾಲ್ ಲೀಗ್ ಮಾದರಿಯ ಪಂದ್ಯಾವಳಿಯು ಹುಲುಸೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿ ನಡೆದು ೮ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಪ್ರಥಮ ಸ್ಥಾನವನ್ನು ಮಲ್ಲೇನಹಳ್ಳಿಯ ಆರ್.ಕೆ. ಸ್ಟೆçöÊಕರ್ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನ ಹೆಬ್ಬಾಲೆಯ ಟೀಮ್ ಅಗಸ್ತö್ಯ ತಂಡ, ತೃತೀಯ ಸ್ಥಾನವನ್ನು ಆಲೂರು-ಸಿದ್ದಾಪುರದ ಅಹಲ್ಯ ಫ್ರೆಂಡ್ಸ್ ತಂಡ, ಚತುರ್ಥ ಸ್ಥಾನವನ್ನು ಹುಲುಸೆಯ ಡಿ.ಎನ್. ಬ್ಲಾಸ್ಟರ್ ತಂಡ ಪಡೆದುಕೊಂಡಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಹೆಬ್ಬಾಲೆಯ ಕಾಂಗ್ರೆಸ್ ಮುಖಂಡ ನಟೇಶ್ ಗೌಡ ನೆರವೇರಿಸಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದ ಗ್ರಾಮದಲ್ಲಿ ಯುವಕರ ಸಂಘಟನೆಯ ಪೂರಕವಾಗುತ್ತದೆ. ಇದರ ಮುಖೇನ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು. ಬಹುಮಾನ ವಿತರಣೆಯನ್ನು ಕಾಂಗ್ರೆಸ್ ಮುಖಂಡ ಮಿಥನ್ ಗೌಡ ವಿತರಿಸಿದರು. ಈ ಸಂದರ್ಭ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ, ಎಸ್.ಡಿ.ಪಿ.ಕೆ. ಫ್ರೆಂಡ್ಸ್ ಸಂಘದ ಆಯೋಚಕರಾದ ಪ್ರಮೋದ್, ಕಿರಣ್, ದಿಲೀಪ್, ಸುಮಂತ್ ಸೇರಿದಂತೆ ಸಮಿತಿಯ ಯುವಕ ತಂಡದವರು ಹಾಜರಿದ್ದರು.