ಪೊನ್ನಂಪೇಟೆ, ನ.೨೩: ತಾ.೨೧ ರಂದು ನಾಪತ್ತೆಯಾಗಿದ್ದ ಬೆಸಗೂರು ಗ್ರಾಮದ ಮಹಿಳೆಯ ಶವ ಹೊಳೆಯಲ್ಲಿ ಪತ್ತೆಯಾಗಿದೆ. ಬಾಚಮಾಡ ಎಂ.ಸೌಮ್ಯ (೩೯) ಎಂಬವರ ಶವ ಬೆಸಗೂರು ಕೀರೆಹೊಳೆಯಲ್ಲಿ ಇಂದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತ ನೀರಿಕ್ಷಕ ಗೋವಿಂದರಾಜು, ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಸಿಬ್ಬಂದಿ ಹರೀಶ್, ಪ್ರಸನ್ನ, ಪ್ರವೀಣ್, ಬಸಮ್ಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪತಿಯ ಕಿರುಕುಳದಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೌಮ್ಯ ಅವರ ತಂದೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತೆ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.