ಮಡಿಕೇರಿ, ನ. ೨೩: ಕೊಡಗಿನ ಜನತೆ ಕಾನೂನಿಗೆ ಸೂಕ್ತ ಗೌರವ ನೀಡುತ್ತಿದ್ದು, ರಾಜಿ ಪಂಚಾಯಿತಿಗಳಿಗೆ ಆದ್ಯತೆ ನೀಡದೇ ಇರುವುದರಿಂದಲೇ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಅಪರಾಧಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊರವಲಯದಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಯೋಜಿತ ನಿರಂತರ ಕಲಿಕಾ ಕಾರ್ಯಾಗಾರ ಮತ್ತು ಔಷಧಿ ಕ್ಷೇತ್ರದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ರಾಮರಾಜನ್ ಮಾತನಾ ಡಿದರು.
ಶಿಸ್ತು ಮತ್ತು ಶಿಕ್ಷಣವಂತರಾದ ಕೊಡಗಿನ ಜನತೆ ಹೆಚ್ಚಿನ ಪಾಲು ಕಾನೂನು ಅನುಸರಿಸುತ್ತಾ ನಿಯಮ ಗಳನ್ನು ಪಾಲಿಸುತ್ತಾರೆ. ಹೀಗಾಗಿಯೇ ಇಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪರಾಧ ಪ್ರಕರಣಗಳ ಸಂದರ್ಭ ರಾಜಿಪಂಚಾಯಿತಿ, ಒತ್ತಡ ಹೇರುವಿಕೆ ಗಣನೀಯವಾಗಿ ಕಡಿಮೆಯಿದೆ. ಇದರಿಂದಾಗಿಯೇ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಶಿಕ್ಷೆಯ ಪ್ರಮಾಣ ಕೊಡಗಿನಲ್ಲಿ ಹೆಚ್ಚಾಗಿದೆ ಎಂದರು.
ಮಾದಕ ವ್ಯಸನಿಗಳಿಗೆ ಮಾದಕ ಪದಾರ್ಥಗಳನ್ನು ಅಂಗಡಿಗಳಲ್ಲಿ ಯಾರೂ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಔಷಧಿ ವ್ಯಾಪಾರಸ್ಥರೂ ಕೈಜೋಡಿಸುವಂತೆ ಮನವಿ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ, ಔಷಧಿ ವ್ಯಾಪಾರಸ್ಥರ ಬಗ್ಗೆ ಜನಸಾಮಾನ್ಯರಲ್ಲಿ ಅತಿಯಾದ ವಿಶ್ವಾಸ, ನಂಬಿಕೆ ಇರುತ್ತದೆ. ಹೀಗಾಗಿ ಈ ವಿಶ್ವಾಸವನ್ನು ಖಂಡಿತವಾಗಿಯೂ ವ್ಯಾಪಾರಸ್ಥರು ಕಳೆದುಕೊಳ್ಳಬಾರದು ಎಂದರು.
ಸರಿಯಾದ ಔಷಧಿ ನೀಡದೇ ರೋಗಿ ಆರೋಗ್ಯ ಸಂಬAಧಿತ ಸಮ ಸ್ಯೆಗೆ ಸಿಲುಕಿದ್ದೇ ಆದಲ್ಲಿ ಔಷಧಿ ವ್ಯಾಪಾರಸ್ಥರೂ ಒಂದಲ್ಲ ಒಂದು ದಿನ ಕಾನೂನಿನ ಕುಣಿಕೆ ಎದುರಿಸಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದ ರಾಮ ರಾಜನ್, ಓರ್ವ ಔಷಧಿ ವ್ಯಾಪಾರಸ್ಥ ಲೋಪದೋಷಗಳಿಂದ ಕೂಡಿದ ಔಷಧಿ ನೀಡಿದ್ದೇ ಆದಲ್ಲಿ ಆಗ ಸಮಸ್ಯೆ ಉಂಟಾದರೆ ಅದು ಎಲ್ಲಾ ಔಷಧಿ ವ್ಯಾಪಾರಸ್ಥರ ಮೇಲೂ ಸಮಾಜದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಔಷಧಿ ವ್ಯಾಪಾರಸ್ಥರು ಅತ್ಯಂತ ಜಾಗರೂಕತೆಯಿಂದ ಔಷಧಿ ಮಾರಾಟ ಮಾಡುವಂತೆಯೂ ಸಲಹೆ ನೀಡಿದರು.
ಕೊಡಗು ಜಿಲ್ಲಾ ಔಷಧಿ ವ್ಯಾಪಾರ ಸ್ಥರ ಸಂಘದ ಅಧ್ಯಕ್ಷ, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ದೇಶದಲ್ಲಿ ೧೨.೫೦ ಲಕ್ಷ ಔಷಧಿ ವ್ಯಾಪಾರಸ್ಥರಿದ್ದು, ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದಲ್ಲಿ ೨೬ ಸಾವಿರ ಸದಸ್ಯರಿದ್ದರೆ, ಕೊಡಗು ಜಿಲ್ಲಾ ಸಂಘದಲ್ಲಿ ೨೬೦ ಸದಸ್ಯರಿದ್ದಾರೆ ಎಂದರು. ಮಾದಕ ದ್ರವ್ಯಗಳ ವಿರುದ್ಧ ಪೊಲೀಸ್ ಇಲಾಖೆ ಕೈಗೊಂಡಿರುವ ಸಮರಕ್ಕೆ ಜಿಲ್ಲಾ ಔಷಧಿ ವ್ಯಾಪಾರಸ್ಥರು ಸಹಕಾರ ನೀಡುತ್ತಾರೆ ಎಂದು ಭರವಸೆ ನೀಡಿದ ಜೀವನ್, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಎಲ್ಲರ ಸಂಕಲ್ಪವೂ ಆಗಿರಬೇಕೆಂದು ಅಭಿಪ್ರಾಯಪಟ್ಟರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ಅನಿಲ್ ಧವನ್ ಮಾತ ನಾಡಿ, ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಔಷಧಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ವ್ಯಾಪಾರಿಗಳು ಮಹತ್ವ ನೀಡಲೇಬೇಕು. ಕಳಪೆ ಗುಣಮಟ್ಟದ ಆಹಾರ ವಿತರಣೆ ಬಗ್ಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಮಡಿಕೇರಿ ತಾಲೂಕು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಚೇತನ್ ಮಾತ ನಾಡಿ, ಕೊಡಗಿನಲ್ಲಿ ಪ್ರಸ್ತುತ ೧೯೦ ಕ್ಷಯ ರೋಗ ಪ್ರಕರಣಗಳು ವರದಿ ಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕ್ಷಯ ರೋಗ ನಿಯಂತ್ರಣ ಸಂಬAಧ ಮನೆ ಮನೆ ಪರಿಶೀಲನಾ ಕಾರ್ಯವನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳ ಮೂಲಕ ನಡೆಸಲಾಗುತ್ತಿದೆ. ೨೦೨೫ ರಲ್ಲಿ ಭಾರತವನ್ನು ಕ್ಷಯ ಮುಕ್ತ ದೇಶವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಕ್ಷಯ ರೋಗ ಲಕ್ಷಣವನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಪ್ರಾರಂಭಿಸಿದರೆ ಕ್ಷಯ ರೋಗ ನಿವಾರಣೆ ಸುಲಭ ಸಾಧ್ಯ ಎಂದರು. ಅಗತ್ಯವುಳ್ಳವರಿಗೆ ಮನೆಗಳಿಗೇ ತೆರಳಿ ಕ್ಷಯ ರೋಗ ನಿವಾರಣೆಗೆ ಔಷಧಿ ನೀಡುವ ಕೆಲಸವನ್ನೂ ವೈದ್ಯಕೀಯ ಸಿಬ್ಬಂದಿಗಳು ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮೈಸೂರು ವೃತ್ತದ ಉಪ ಔಷಧ ನಿಯಂತ್ರಕ ಬಿ.ಪಿ. ಅರುಣ್ ಮಾತನಾಡಿ, ಸಾಮಾಜಿಕ ಬದ್ದತೆಯೊಂದಿಗೆ ಔಷಧಿ ನೀಡುವ ಮೂಲಕ ಆರೋಗ್ಯವಂತ ಭಾರತಕ್ಕೆ ಔಷಧಿ ವ್ಯಾಪಾರಿಗಳು ಗಣನೀಯ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಗುರುನಾಥ್ ಮಾಗಣಗೇರಿ ಮಾತನಾಡಿ, ನಕಲಿ ಔಷಧಿಗಳ ವಹಿವಾಟು ಕಂಡುಬAದಲ್ಲಿ ಔಷಧ ನಿಯಂತ್ರಣಾಧಿಕಾರಿಗೆ ಸಾರ್ವಜನಿಕರು ದೂರು ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರಲ್ಲದೇ, ರೋಗ ನಿರೋಧಕ ಶಕ್ತಿಯು ದೇಹಕ್ಕೆ ಅತ್ಯಗತ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿಯೇ ಮಾನವನ ದೇಹದಲ್ಲಿ ಕುಂಠಿತಗೊಳ್ಳುತ್ತಿರುವುದು ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ಮಾತ ನಾಡಿ, ಪ್ರತಿಯೊಬ್ಬ ವ್ಯಾಪಾರಸ್ಥರೂ ಕಾನೂನು ಪ್ರಕಾರ ವಹಿವಾಟನ್ನು ನೋಂದಾಯಿಸಿಕೊAಡು ತಮ್ಮಲ್ಲಿನ ಕಾರ್ಮಿಕ, ಸಿಬ್ಬಂದಿಗಳಿಗೆ ನಿಯಮಾ ನುಸಾರ ಕಲ್ಪಿಸಬೇಕಾದ ಸೌಲಭ್ಯ ಗಳನ್ನು ನೀಡಬೇಕೆಂದು ಸೂಚಿಸಿದರು.
ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಕಾನೂನು ಸಲಹೆಗಾರ ಕೆ.ಹರೀಶ್, ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ, ಉಪಾಧ್ಯಕ್ಷರಾದ ಅಂಬೆಕಲ್ ವಿನೋದ್, ಸಂಪತ್ ಕುಮಾರ್, ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಸಂಘದ ಖಜಾಂಚಿ ಪ್ರಸಾದ್ ಗೌಡ ವಂದಿಸಿ, ಸಂಘಟನಾ ಕಾರ್ಯದರ್ಶಿ ಕೆ. ವಸಂತ್ ಕುಮಾರ್ ನಿರೂಪಿಸಿ, ರಮ್ಯ ಪ್ರಸಾದ್ ಪ್ರಾರ್ಥಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಔಷಧಿ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಮೂಲಕ ವಿವಿಧ ವಿಚಾರಗಳ ಬಗ್ಗೆ ತಮ್ಮಲ್ಲಿನ ಸಂದೇಹ ಪರಿಹರಿಸಿಕೊಂಡರು.