ಕಣಿವೆ, ನ. ೨೨: ತುಂಬು ಗರ್ಭಿಣಿಯಾಗಿದ್ದ ಪತ್ನಿಯ ಸಾವಿನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾನೆ.
ಕುಶಾಲನಗರ ಸಮೀಪದ ಸುಂಕದಹಳ್ಳಿ ನಿವಾಸಿಯಾ ಗಿದ್ದ ಹರ್ಷ (೨೩) ಸಾವನ್ನ ಪ್ಪಿದ ವ್ಯಕ್ತಿ. ಕಳೆದ ಒಂದು ವಾರದ ಹಿಂದಷ್ಟೆ ಹರ್ಷನ ಪತ್ನಿ ಹೇಮಾ (೨೩) ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ಕುಸಿದು ಬಿದ್ದು, ಅಸ್ವಸ್ಥಗೊಂಡು ಮೃತಪಟ್ಟಿದ್ದಳು. ಜಿಲ್ಲಾಸ್ಪತ್ರೆಯಲ್ಲಿ ಪತ್ನಿಯ ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭ ಹರ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ತಕ್ಷಣ ಚಿಕಿತ್ಸೆಗೆ ಆತನನ್ನು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾನೆ.
ಇಬ್ಬರು ಪ್ರೀತಿ ಮಾಡಿ ಕುಟುಂಬದ ಒಪ್ಪಿಗೆ ಸಿಗದ ಕಾರಣ ಅವರುಗಳಿಂದ ದೂರವಾಗಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಹೇಮಾಳು ತುಂಬು ಗರ್ಭಿಣಿಯಾಗಿದ್ದು, ೯ ತಿಂಗಳಿಗೆ ಕಾಲಿಟ್ಟಿದ್ದಳು. ಈ ಸಂದರ್ಭ ಅಮ್ಮನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು. ಆದರೆ, ಅನ್ಯಜಾತಿ ಯುವಕನನ್ನು ವಿವಾಹವಾದ ಕಾರಣ ಮುಂದಿಟ್ಟು ತಾಯಿ ಮಗಳನ್ನು ನೋಡಲು ಮುಂದಾಗಿರಲಿಲ್ಲ. ಇದರಿಂದ ಹೇಮಾ ನೊಂದಿದ್ದಳು. ಮನೆಯಲ್ಲಿ ಒಂಬAಟಿಯಾಗಿದ್ದ ಸಂದರ್ಭ ಮೂರ್ಛೆ ಬಿದ್ದು ಸಾವಿಗೀಡಾಗಿದ್ದಳು.
ಲೇಖನ : ಕೆ.ಎಸ್.ಮೂರ್ತಿ