ಮಡಿಕೇರಿ, ನ. ೨೨: ರಾಜ್ಯದ ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಕುರಿತಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆ ಆರಂಭಗೊAಡಿದೆ. ನಿಗಮ ಮಂಡಳಿಗಳ ಜತೆಗೆ ವಿವಿಧ ಭಾಷಾ ಅಕಾಡೆಮಿಗಳಿಗೂ ಪದಾಧಿಕಾರಿಗಳ ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ ಇದೀಗ ದಿಢೀರನೆ ಈ ಬಗ್ಗೆ ಸಂಚಲನ ಶುರುವಾಗಿದೆ. ನಿನ್ನೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜಿನವಾಲ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಇದೀಗ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಇರುವ ಎರಡು ಭಾಷಾ ಅಕಾಡೆಮಿಗಳ ನೇಮಕಾತಿ ವಿಚಾರವೂ ಗರಿಗೆದರಿದಂತಾಗಿದೆ. ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿಗೆ ಸಂಬAಧಿಸಿದAತೆ ಹಲವಾರು ಮಂದಿ ಆಕಾಂಕ್ಷಿಗಳಿದ್ದು ಇದೀಗ ಎರಡು ಅಕಾಡೆಮಿಗಳ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಬಹುದು ಎಂಬ ಕೌತುಕ ಹೆಚ್ಚಾಗಿದೆ.
ಕೊಡವ ಅಕಾಡೆಮಿ: ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹಲವಾರು ಆಕಾಂಕ್ಷಿಗಳಿದ್ದಾರೆ. ಬಹುತೇಕರು ಈ ಪಟ್ಟಕ್ಕಾಗಿ ತಮ್ಮದೇ ಪ್ರಯತ್ನದಲ್ಲಿದ್ದಾರೆ.
(ಮೊದಲ ಪುಟದಿಂದ) ಇದೀಗ ‘ಶಕ್ತಿ’ಗೆ ಕೆಲವು ಮೂಲಗಳ ಪ್ರಕಾರ ತಿಳಿದು ಬಂದAತೆ ಸದ್ಯದ ಆಕಾಂಕ್ಷಿಗಳ ಪಟ್ಟಿಯಲ್ಲಿ ನೆರವಂಡ ಉಮೇಶ್, ತೆನ್ನಿರ ಮೈನಾ, ಬೊಳ್ಳಜಿರ ಅಯ್ಯಪ್ಪ, ಇಟ್ಟೀರ ಬಿದ್ದಪ್ಪ, ಉಳುವಂಗಡ ಕಾವೇರಿ, ತೆನ್ನೀರ ರಮೇಶ್, ಅವರುಗಳ ಹೆಸರು ಕೇಳಿ ಬರುತ್ತಿದೆ. ಇವರ ಪೈಕಿ ನಾಲ್ವರ ಹೆಸರು ಅಂತಿಮ ಪಟ್ಟಿಯಲ್ಲಿದೆ ಎನ್ನಲಾಗಿದೆ. ಬೊಳ್ಳಜೀರ ಅಯ್ಯಪ್ಪ, ನೆರವಂಡ ಉಮೇಶ್, ಇಟ್ಟೀರ ಬಿದ್ದಪ್ಪ, ತೆನ್ನೀರಾ ಮೈನಾ ಈ ನಾಲ್ವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ಖಚಿತ ಎನ್ನಲಾಗುತ್ತಿದೆ.
ಅರೆಭಾಷಾ ಅಕಾಡೆಮಿ: ಅರೆಭಾಷಾ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಗೆ ಸಂಬAಧಿಸಿದAತೆಯೂ ಹಲವು ಆಕಾಂಕ್ಷಿಗಳಿದ್ದು ತಮ್ಮ ಬೇಡಿಕೆಯನ್ನು ಪಕ್ಷದ ಮೂಲಕ ಮುಂದಿಟ್ಟಿದ್ದಾರೆ. ಅಲ್ಲದೆ ತಮ್ಮದೇ ಆದ ಪ್ರಯತ್ನಗಳನ್ನೂ ಈ ನಿಟ್ಟಿನಲ್ಲಿ ನಡೆಸಿದ್ದಾರೆ. ಸೂರಜ್ ಹೊಸೂರು, ಅಂಬೆಕಲ್ ನವೀನ್, ಕೊಡಗಿನ ತೀರ್ಥಪ್ರಸಾದ್, ಮಂದ್ರೀರ ಮೋಹನ್‌ದಾಸ್, ಕಾವೇರಮ್ಮ ಸೋಮಣ್ಣ, ರಮಾಕಾಂತ್, ಸೂರ್ತಲೆ ಸೋಮಣ್ಣ ಹೆಸರುಗಳು ಕೇಳಿಬಂದಿದೆ. ಇವರುಗಳ ಪೈಕಿ ಯಾರಾದರೊಬ್ಬರು ಈ ಬಾರಿ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಅರೆಭಾಷಾ ಅಕಾಡೆಮಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನೂ ಹೊಂದಿದೆ. ಈ ವಿಭಾಗದಿಂದಲೂ ಕೆಲವರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಕಳೆದ ಬಾರಿ ಈ ವಿಭಾಗದವರಾದ ಲಕ್ಷಿö್ಮನಾರಾಯಣ ಕಜೆಗದ್ದೆ ಅವರು ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕೊಡಗಿನವರೆಗೆ ಅಧ್ಯಕ್ಷ ಸ್ಥಾನ ಖಚಿತ ಎಂದು ಹೇಳಲಾಗುತ್ತಿದೆ. -ಕಾಯಪಂಡ ಶಶಿ ಸೋಮಯ್ಯ