ಚೆಯ್ಯಂಡಾಣೆ, ನ. ೨೨: ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಪಶು ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ಚೆಯ್ಯಂಡಾಣೆ ಪಶು ವೈದ್ಯ ಶಾಲೆಯಲ್ಲಿ ಉಚಿತ ರೇಬೀಸ್ ಲಸಿಕಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ತಮ್ಮ ಮನೆಯಲ್ಲಿ ಸಾಕು ನಾಯಿಗಳನ್ನು ತಂದು ಉಚಿತ ಶಿಬಿರದ ಪ್ರಯೋಜನಗಳನ್ನು ಪಡೆದುಕೊಂಡರು. ಶಿಬಿರದಲ್ಲಿ ೭೦ ಕ್ಕೂ ಹೆಚ್ಚು ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯರಾದ ಡಾ. ಶಿಲ್ಪಾ, ನಿವೃತ್ತ ಹಿರಿಯ ಪಶು ವೈದ್ಯಪರೀಕ್ಷರಾದ ಡಾ. ಪಳಂಗಪ್ಪ, ಚೆಯ್ಯಂಡಾಣೆ ಪಶು ವೈದ್ಯಪರೀಕ್ಷಕರಾದ ಗುರುರಾಜ್, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯೆ ನೇತ್ರಾವತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ, ಸಂಜೀವಿನಿ ಒಕ್ಕೂಟದ ಪಶು ಸಖಿ ಮೀನಾಕ್ಷಿ, ಎಂಬಿಕೆ ವಸಂತಿ, ರೋಹನ್, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.