ಮುಳ್ಳೂರು, ನ. ೨೨: ‘ಅರಣ್ಯ, ಪರಿಸರ, ಸಸ್ಯ ಸಮೃದ್ಧಿ, ಅರಣ್ಯ ಜೀವಿ ಸಂಕುಲವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಮಡಿಕೇರಿ ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ ಅಭಿಪ್ರಾಯಪಟ್ಟರು. ಅವರು ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಗಿಡಗಳಿಂದ ದೊರೆಯುವ ಆಮ್ಲಜನಕದಿಂದ ಮನುಷ್ಯ ಉತ್ತಮ ಗಾಳಿ ಸೇವನೆಯಿಂದ ಆರೋಗ್ಯವಾಗಿ ಜೀವನ ನಡೆಸುತ್ತಾನೆ. ಆದರೆ ಇಂದು ಮನುಷ್ಯನ ದುರಾಸೆಗೆ ಅರಣ್ಯ, ಪರಿಸರ ಬರಿದಾಗುತ್ತಿದ್ದು ಈ ವಿದ್ಯಮಾನದಲ್ಲಿ ಪ್ರತಿಯೊಬ್ಬರೂ ಅರಣ್ಯ ಮತ್ತು ಪರಿಸರ ಮುಳ್ಳೂರು, ನ. ೨೨: ‘ಅರಣ್ಯ, ಪರಿಸರ, ಸಸ್ಯ ಸಮೃದ್ಧಿ, ಅರಣ್ಯ ಜೀವಿ ಸಂಕುಲವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಮಡಿಕೇರಿ ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ ಅಭಿಪ್ರಾಯಪಟ್ಟರು. ಅವರು ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಗಿಡಗಳಿಂದ ದೊರೆಯುವ ಆಮ್ಲಜನಕದಿಂದ ಮನುಷ್ಯ ಉತ್ತಮ ಗಾಳಿ ಸೇವನೆಯಿಂದ ಆರೋಗ್ಯವಾಗಿ ಜೀವನ ನಡೆಸುತ್ತಾನೆ. ಆದರೆ ಇಂದು ಮನುಷ್ಯನ ದುರಾಸೆಗೆ ಅರಣ್ಯ, ಪರಿಸರ ಬರಿದಾಗುತ್ತಿದ್ದು ಈ ವಿದ್ಯಮಾನದಲ್ಲಿ ಪ್ರತಿಯೊಬ್ಬರೂ ಅರಣ್ಯ ಮತ್ತು ಪರಿಸರ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಉಪಾಧ್ಯಕ್ಷ ಸಿ.ವಿ.ಶಂಭುಲಿAಗಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪರಮೇಶ್ವರ್, ಖಜಾಂಚಿ ಡಾ. ಉದಯ್ ಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ಸುಲೋಚನ ಗಿರೀಶ್, ಪದವಿ ಕಾಲೇಜು ಪ್ರಾಂಶುಪಾಲ ಎಂ.ಆರ್. ನಿರಂಜನ್, ಪ.ಪೂ. ಕಾಲೇಜು ಪ್ರಾಂಶುಪಾಲ ಪವಾರ್, ಪ.ಪೂ. ಕಾಲೇಜು ಆಡಳಿತಾಧಿಕಾರಿ ಜಗದೀಶ್ ಬಾಬು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಗೆ ಸೇರಿದ ಜಾಗದಲ್ಲಿ ಗಿಡಗಳನ್ನು ನೆಡಲಾಯಿತು.