*ಸಿದ್ದಾಪುರ, ನ. ೨೩: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರುವ ಕರಡಿಗೋಡು ಗ್ರಾಮದಲ್ಲಿ ನೆಮ್ಮದಿಯ ಬದುಕರಸಿ ಬಂದ ಬಡಜನರು ಸಮಸ್ಯೆಗಳ ಪ್ರವಾಹಕ್ಕೆ ಸಿಲುಕಿ ಬಿಡುಗಡೆಗಾಗಿ ಕಾಯುತ್ತಲೇ ಇದ್ದಾರೆ. ಮಳೆಗಾಲ ಬಂತೆAದರೆ ಯುದ್ಧವೇ ಎದುರಾದಂತೆ ತಲ್ಲಣಿಸಿ ಬಿಡುತ್ತಾರೆ. ಗ್ರಾಮಕ್ಕೆ ರಸ್ತೆಯನ್ನು ಧಾರೆಯೆರೆಯಬೇಕಾಗಿದ್ದ ಆಡಳಿತ ವ್ಯವಸ್ಥೆ, ಕಣ್ಮುಚ್ಚಿ ಕುಳಿತುಬಿಟ್ಟಿದೆ. ಇಂದಲ್ಲ ನಾಳೆ ಬದುಕು ಮಗ್ಗುಲು ಬದಲಿಸಬಹುದು ಎಂದು ಕಾಯ್ದಿದ್ದ, ಹೊತ್ತಿನ ತುತ್ತಿಗಾಗಿ ಕೂಲಿಯನ್ನೇ ನಂಬಿರುವ ಕುಟುಂಬಗಳು ತಾಳ್ಮೆ ಕಳೆದುಕೊಳ್ಳತೊಡಗಿವೆ.

ಹೌದು, ಕರಡಿಗೋಡು ಎಂಬ ಗ್ರಾಮ ಪ್ರತೀ ವರ್ಷ ಮಳೆಗಾಲದಲ್ಲಿ ಮಾಧ್ಯಮಗಳಲ್ಲಿ ಸÀÄದ್ದಿಯಾಗಿ, ಜನರ ಆಕ್ರಂದನ ಹೊರಜಗತ್ತಿಗೆ ಮಾರ್ದನಿಸುತ್ತದೆ. ಕಾವೇರಿ ಉಕ್ಕೇರಿದಾಗ, ನದಿ ದಂಡೆಯ ಜನರ ಬದುಕೂ ಮುಳುಗೇಳುತ್ತದೆ. ಅನೇಕರ ಮನೆಗಳು ನೀರಿಗೆ ಹೋಮವಾಗಿದ್ದು, ಇನ್ನೂ ಕೆಲವರ ಮನೆಗಳು ಜರ್ಝರಿತವಾಗಿ ನಿಂತಿವೆ. ಮತ್ತೆ ಹಲವರು ಸಾಲ ಮಾಡಿ ತಮ್ಮ ಮನೆಗಳಿಗೆ ತಾತ್ಕಾಲಿಕ ಜೀವ ಕೊಟ್ಟಿದ್ದಾರೆ. ಏಳುಬೀಳಿನ ದಶಕಗಳ ಬದುಕಿಗೆ ಯಾವ ಸರ್ಕಾರಗಳೂ ಮುಕ್ತಿ ನೀಡಿಲ್ಲ. ಎಲ್ಲ ಸಂತ್ರಸ್ತರನ್ನು ದೂರದ ಬಿಟ್ಟಂಗಾಲಕ್ಕೆ ಸ್ಥಳಾಂತರಿಸುವ ಚಿಂತನೆಯಿತ್ತು. ಆದರೆ, ಹುಟ್ಟೂರನ್ನು ಬಿಟ್ಟು ಅಷ್ಟೊಂದು ದೂರಕ್ಕೆ ನಾವು ಬರುವುದಿಲ್ಲ ಎಂದುಬಿಟ್ಟರು ಜನ. ಆಸುಪಾಸಿನಲ್ಲೆಲ್ಲಾದರೂ ಜಾಗ ಹುಡುಕಿಕೊಡಿ ಎಂಬುದು ಈ ಮಂದಿಯ ಬೇಡಿಕೆ.

ಇದು ಪ್ರಧಾನ ಸಮಸ್ಯೆಯಾದರೆ, ಕರಡಿಗೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯದ್ದೇ ಇನ್ನೊಂದು ಕಣ್ಣೀರ ಕಥೆ. ಅನೇಕ ವರ್ಷಗಳಿಂದ ಡಾಮರು ಕಾಣದೆ ಹೊಂಡಗುAಡಿಗಳಿAದ ಭರ್ತಿಯಾಗಿರುವ ಈ ಮಾರ್ಗದಲ್ಲಿ ಸಂಚಾರ ಹೇಗೆ ಎಂಬುದೇ ಜನರನ್ನು ಕಾಡುತ್ತಿರುವ ಪ್ರಶ್ನೆ. ರಸ್ತೆಯ ತುಂಬೆಲ್ಲ ಗುಂಡಿಗಳಿದ್ದರೆ, ಕೆಲವೆಡೆ ಬರೆ ಜರಿದು ರಸ್ತೆಗೆ ಬಿದ್ದಿವೆ. ಸಿದ್ದಾಪುರದಿಂದ ಗ್ರಾಮಕ್ಕೆ ಯಾವ ಆಟೋಗಳೂ ಬರಲಾರವು. ಹಾಗೊಂದು ವೇಳೆ ಬಂದರೂ ದುಪ್ಪಟ್ಟು ಹಣ ನೀಡಲೇಬೇಕು. ತುರ್ತು ಸಂದರ್ಭಗಳಲ್ಲಿ ಪ್ರಾಣ ಬಿಡುವುದೊಂದೇ ಮಾರ್ಗ ಎಂಬAತಾಗಿದೆ ಪರಿಸ್ಥಿತಿ! ಪ್ರತಿಷ್ಠಿತ ರೆಸಾರ್ಟ್ ಇರುವುದರಿಂದ ಕರಡಿಗೋಡು ಎಂಬ ಗ್ರಾಮದ ಹೆಸರು ಸದ್ಯಕ್ಕೆ ಚಾಲ್ತಿಯಲ್ಲಿದೆ. ಈ ರೆಸಾರ್ಟ್ಗೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಿಂದಾಗ್ಗೆ ಬರುತ್ತಾರೆ. ಆದರೆ, ಅವರಿಗೆ ಇಲ್ಲಿನ ಸಮಸ್ಯೆ ನೇರವಾಗಿ ಕಾಣಿಸುವುದೇ ಇಲ್ಲ. ಕಾರಣ, ಮೈಸೂರು ರಸ್ತೆಯಿಂದ ಸಂಪರ್ಕಿಸುವ ಸುಸ್ಥಿತಿಯ ರಸ್ತೆ ಮೂಲಕವೇ ಇವರೆಲ್ಲ ರೆಸಾರ್ಟ್ ಪ್ರವೇಶಿಸುತ್ತಾರೆ. ಸಿದ್ದಾಪುರದಿಂದ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಂತೂ ವಾಹನಗಳಿರಲಿ, ಮನುಷ್ಯರೂ ನಡೆದಾಡಲಾಗದಂಥ ಪರಿಸ್ಥಿತಿಯಿದೆ. ಕಳೆದ ೧೫ ವರ್ಷಗಳಿಂದ ಈ ರಸ್ತೆ ಕಾಯಕಲ್ಪ ಕಂಡಿಲ್ಲ. ಜಿಲ್ಲಾ ಅಥವಾ ತಾಲೂಕು ಪಂಚಾಯಿತಿಗಳಿAದಲೂ ಕರಡಿ ಗೋಡು ಗ್ರಾಮ ಕಡೆಗಣಿಸಲ್ಪಟ್ಟಿತ್ತು ಎಂಬದು ಸತ್ಯ, ಹೊಂಡಗಳ ಮಧ್ಯೆ ರಸ್ತೆಯನ್ನು ದುರ್ಬಿ ಹಿಡಿದು ಹುಡುಕಬೇಕಾಗಿದೆ. ಒಂದು ಗ್ರಾಮಕ್ಕೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದ್ದ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳ ಜಾಢ್ಯಕ್ಕೆ ಕರಡಿಗೋಡು ಉದಾಹರಣೆಯಾಗಿ ನಿಂತಿದೆ. ಮುಂದಾದರೂ ಈ ನತದೃಷ್ಟ ಗ್ರಾಮದ ಜನರಿಗೆ ನ್ಯಾಯ ಸಿಗಲಿ ಎಂಬು ದೇ ಈ ವರ ದಿಯ ಆಶಯ.

- ಅಂಚೆಮನೆ ಸುಧಿ