ಗೋಣಿಕೊಪ್ಪ ವರದಿ, ನ. ೨೩: ಮತಾಂತರಗೊAಡ ಗಿರಿಜನರನ್ನು ಪರಿಶಿಷ್ಟ ಪಂಗಡದಿAದ ಕೈಬಿಡಬೇಕು ಎಂದು ಆಗ್ರಹಿಸಿ ತಾ.೨೬ ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಗಿರಿಜನ ಸಾಂಸ್ಕೃತಿಕ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಗಿರಿಜನ ಮುಖಂಡ ಜೆ. ಕೆ. ಅಪ್ಪಾಜಿ ಹೇಳಿದರು.
ಅಂದು ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಳ್ಳಲಿದ್ದು, ಸುಮಾರು ೨೫ ಸಾವಿರ ಗಿರಿಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಲ್ಲೆಯಿಂದ ೨ ಸಾವಿರಕ್ಕೂ ಅಧಿಕ ಗಿರಿಜನರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಾಂಗದ ೨ಎ ಅನುಸೂಚಿ ೨ ರಲ್ಲಿ ಸೂಚಿಸಿರುವಂತೆ ಗಿರಿಜನರು ಅವರ ವಿಶ್ವಾಸ, ನಂಬಿಕೆಗಳನ್ನು ತೊರೆದು ಕ್ರೆöÊಸ್ತ ಮತ ಅಥವಾ ಮುಸ್ಲಿಂ ಮತಕ್ಕೆ ಮತಾಂತರಗೊAಡರೆ ಅಂತಹವರನ್ನು ಪರಿಶಿಷ್ಟ ಪಂಗಡದ ಯಾವುದೇ ಜಾತಿ, ಉಪ ಜಾತಿಯ ವ್ಯಕ್ತಿಯಾಗಿ ಪರಿಗಣಿಸಲಾಗದು. ಮೀಸಲಾತಿಯನ್ನು ಸಂಸ್ಕೃತಿ, ಸಂಪ್ರ‍್ರದಾಯಗಳು ಅಭಿವೃದ್ಧಿಗೆಂದು ನೀಡದೆ. ಇಂತಹವುಗಳನ್ನು ಬಿಟ್ಟು ಮತಾಂತರವಾಗುವುದರಿAದ ಪಂಗಡಕ್ಕೆ ಸೇರಿದ ಸರ್ಕಾರಿ ಸೌಲಭ್ಯ, ಸವಲತ್ತು ಪಡೆಯಲು ಅನರ್ಹವಾಗಿರುತ್ತದೆ. ಇಂತಹವರು ಶೇ. ೮೦ ರಷ್ಟು ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದು, ನೈಜ ಗಿರಿಜನರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಗಿರಿಜನ ಸಾಂಸ್ಕೃತಿಕ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಗಿರಿಜನ ಮುಖಂಡ ಶಂಕರ, ಕಾರೆಕಂಡಿ ಹಾಡಿ ಮುಖಂಡ ರವಿ, ಬೊಟ್ಟ ಕುರುಬ ಮುಖಂಡ ದಿನೇಶ್, ಸಾಮಾಜಿಕ ಕಾರ್ಯಕರ್ತ ಹರೀಶ್ ಇದ್ದರು.