ಶನಿವಾರಸಂತೆ, ನ. ೨೩: ತಾ. ೨೭ ರಂದು ಸಮೀಪದ ಹೊಸೂರು ಬೆಟ್ಟದ ಬಸವೇಶ್ವರ ಸ್ವಾಮಿಯವರ ಕೌಟೆಕಾಯಿ ಜಾತ್ರೆ ಪ್ರಯುಕ್ತ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೆ ಬಸವೇಶ್ವರನ ವೇದಿಕೆಯಲ್ಲಿ ಮಧ್ಯಾಹ್ನ ೧೨ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮೂಹ ನೃತ್ಯ, ಚಲನಚಿತ್ರ ಡ್ಯಾನ್ಸ್, ಮಿಮಿಕ್ರಿ, ಭರತನಾಟ್ಯ, ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. ೯೪೮೦೦೯೯೦೦೪ \ ೯೪೮೨೬೫೪೩೨೩