ಮಡಿಕೇರಿ, ನ. ೨೩: ಪುತ್ತರಿ ಹಬ್ಬದ ಪ್ರಯುಕ್ತ ಮಡಿಕೇರಿ ಕೊಡವ ಸಮಾಜದ ಮಂದ್‌ನಲ್ಲಿ ಪುತ್ತರಿ ಈಡ್ ನಡೆಯಿತು.

ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಮಂದ್‌ನ ದೇವನೆಲೆಯಲ್ಲಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು.

ಪುರುಷರು, ಮಕ್ಕಳು ಕೋಲು ಹಿಡಿದು ಮಂದ್‌ನ ಸುತ್ತಲೂ ಕೋಲಾಟ್, ಬೊಳಕಾಟ್ ಆಡಿದರು. ಇನ್ನೆರಡು ದಿನ ಇದೇ ಮಂದ್‌ನಲ್ಲಿ ಕೋಲಾಟ್ ತರಬೇತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಸದಸ್ಯರುಗಳು, ಕೊಡವ ಕೇರಿಯವರು ಭಾಗವಹಿಸಿದ್ದರು.