ಸೋಮವಾರಪೇಟೆ, ನ. ೨೩: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೩ನೇ ಶಾಖೆಯನ್ನು ಮಾದಾಪುರದಲ್ಲಿ ತೆರೆಯಲಾಗಿದ್ದು, ನೂತನ ಶಾಖೆಯ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಪಿ. ಸುಜಾ ಕುಶಾಲಪ್ಪ ನೆರವೇರಿಸಿದರು.
ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಶ್ರೀಸಿದ್ದಿಬುದ್ದಿ ಮಹಾ ಗಣಪತಿ ದೇವಾಲಯದ ಕಟ್ಟಡದಲ್ಲಿ ತೆರೆಯಲಾಗಿರುವ ೨೩ನೇ ಶಾಖೆಯನ್ನು ಉದ್ಘಾಟಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟಿçÃಯ ಬ್ಯಾಂಕ್‌ಗಳಿಗಿAತಲೂ ಸ್ಥಳೀಯ ಸಹಕಾರ ಸಂಘ, ಬ್ಯಾಂಕ್‌ಗಳು ಶೀಘ್ರಗತಿಯಲ್ಲಿ ಸಾಲ ಸೌಲಭ್ಯ ಒದಗಿಸುತ್ತಿವೆ. ಈ ನಿಟ್ಟಿನಲ್ಲಿ ಮಾದಾಪುರದಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ತೆರೆದಿರುವುದು ಶ್ಲಾಘನೀಯ ಎಂದರು.
ನಗದು ಕೌಂಟರ್ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮಂಡೇಪAಡ ಪಿ. ಅಪ್ಪಚ್ಚು ರಂಜನ್, ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಸಂಘದ ಬೆಳವಣಿಗೆ ಸಾಧ್ಯ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಂಕಲ್ಪ ಮಾಡಬೇಕು ಎಂದರು.
ಸ್ಥಳೀಯರು ಮತ್ತು ರೈತರಿಗೆ ಹೆಚ್ವಿನ ಸಾಲ ಸೌಲಭ್ಯ ನೀಡಬೇಕು. ಆ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವಂತಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸಹಕಾರಿಗಳು, ರೈತರಿಗೆ ನೆರವು ನೀಡುವ ಉದ್ದೇಶದಿಂದ ಶಾಖೆ ಸ್ಥಾಪನೆಯಾಗಿದೆ ಎಂದರು.
೨೦೨೩ನೇ ಸಾಲಿನಲ್ಲಿ ೨೩ನೇ ಶಾಖೆಯನ್ನು ಮಾದಾಪುರದಲ್ಲಿ ತೆರೆಯಲಾಗಿದೆ. ಮುಂದಿನ ೨೦೨೪ನೇ ಸಾಲಿನಲ್ಲಿ ೨೪ ನೇ ಶಾಖೆಯನ್ನು ಭಾಗಮಂಡಲದಲ್ಲಿ ತೆರೆಯಲಾಗುವುದು. ಪ್ರಸ್ತುತ ಬ್ಯಾಂಕಿನಲ್ಲಿ ರೂ. ೩೧ ಕೋಟಿ ಠೇವಣಿಯಿದೆ. ರೂ. ೧,೨೦೦ ಕೋಟಿ ಸಾಲ ನೀಡಲಾಗಿದೆ. ಉತ್ತಮ ವ್ಯವಹಾರ ಹಾಗೂ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ೨೧ ಡಿಸಿಸಿಗಳ ಪೈಕಿ ಪಾರದರ್ಶಕ ಹಾಗೂ ಉತ್ತಮ ಕಾರ್ಯನಿರ್ವಹಣೆಯಿಂದ ನಮ್ಮ ಬ್ಯಾಂಕ್ ೫ನೇ ಸ್ಥಾನದಲ್ಲಿದೆ ಎಂದರು.
ಸಹಕಾರ ಸಂಘಗಳು ಸುಭದ್ರವಾಗಿರಬೇಕಾದರೆ ಸಹಕಾರಿಗಳ ಪಾತ್ರ ಮುಖ್ಯ. ರೈತ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ಸಿರಿ ಸಾಲ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಖಾಂತರ ಮಾದಾಪುರದಲ್ಲಿ ಎಟಿಎಂ ಸೌಲಭ್ಯ ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್, ಜಿ.ಪಂ. ಮಾಜಿ ಸದಸ್ಯ ಟಿ.ಪಿ. ಸಂದೇಶ್, ಗರ್ವಾಲೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಕುಶಾಲಪ್ಪ, ಸಹಕಾರ ಇಲಾಖೆಯ ನಿಬಂಧಕ ಕೃಷ್ಣ ಪ್ರಸಾದ್, ಸಿಇಓ ಉಮಾಕಾಂತ್, ಸೇರಿದಂತೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರುಗಳು ಉಪಸ್ಥಿತರಿದ್ದರು.