ವರದಿ : ಚಂದ್ರಮೋಹನ್
ಕುಶಾಲನಗರ, ನ. ೨೨: ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ೪ ಮಂದಿಯ ತಂಡ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದಲ್ಲಿ ವೈದ್ಯರೊಬ್ಬರ ಮನೆಗೆ ನುಗ್ಗಿ ಮನೆಯನ್ನು ತಲಾಶ್ ಮಾಡಿದ ಪ್ರಕರಣದ ಸಂಬAಧ ನಾಲ್ಕು ಮಂದಿ ನಕಲಿ ಅಧಿಕಾರಿಗಳು ಕುಶಾಲನಗರ ಪೊಲೀಸರ ವಶಕ್ಕೆ ಸಿಕ್ಕಿಬಿದ್ದಿರುವ ಪ್ರಕರಣವೊಂದು ನಡೆದಿದೆ.
ತಾ.೨೨ ರಂದು ಆರೋಪಿ ಗಳಾದ ಬಿಟ್ಟಂಗಾಲದ ಟೀನಾ ನಂಜಪ್ಪ (೩೭), ಬೇತು ಗ್ರಾಮದ ಕಾರ್ಯಪ್ಪ (೪೨), ಪೊನ್ನಂಪೇಟೆಯ ನೀತಾ ಮಿಳಿಂದ್ (೪೫) ಮತ್ತು ದೇವನಹಳ್ಳಿಯ ಹರೀಶ್ (೩೩) ಎಂಬವರುಗಳನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿರುವುದಾಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೆ. ರಾಮರಾಜನ್ ಅವರು
ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಖಚಿತಪಡಿಸಲಾಗಿದೆ.
ಇನ್ನು ಮುಂದೆಯೂ ಯಾವುದೇ ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಬೇರೆ ಇಲಾಖೆ ಹೆಸರಿನ ಅಧಿಕಾರಿಗಳು ಎಂದು ಮನೆ ಅಥವಾ ಇತರ ಸ್ಥಳಗಳ ಪರಿಶೀಲನೆ ನಡೆಸುವುದು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ ೧೧೨ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾAಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಎಸ್.ಪಿ. ಕೋರಿದ್ದಾರೆ. ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಘಟನೆಯ ವಿವರ ಹೀಗಿದೆ : ನವೆಂಬರ್ ೯ರಂದು ಬೆಳಿಗ್ಗೆ ನಾಲ್ಕು ಜನರ ತಂಡ ಕುಶಾಲನಗರದಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರವೀಣ್ ದೇವರಗುಂಡ ಅವರ ಮುಳ್ಳುಸೋಗೆ ಗ್ರಾಮದ ಮನೆಗೆ ನುಗ್ಗಿ ತಾವುಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು. ನಿಮ್ಮ ಮನೆಯಲ್ಲಿ ಇತ್ತೀಚೆಗೆ ಆ್ಯಂಬುಲೆನ್ಸ್ ಒಂದರಲ್ಲಿ ರೂ. ೨೦೦ ಕೋಟಿ ಬಂದಿರುವುದಾಗಿ ಹೇಳಿದ್ದು, ಈ ಬಗ್ಗೆ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ತಾವು ಧರಿಸಿದ ಐಡಿ ಕಾರ್ಡ್ಗಳನ್ನು ತೋರಿಸಿ ವೈದ್ಯರ ಬಳಿ ಇದ್ದ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಸಿ ಕೋಣೆಯಲ್ಲಿ ಕೂರಿಸಿ ಮನೆಯ ಎಲ್ಲಾ ಕೊಠಡಿಗಳನ್ನು ತಲಾಶ್ ಮಾಡಿ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿರುವುದಾಗಿ ಡಾ. ಪ್ರವೀಣ್ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೋವಾ ಕಾರಿನಲ್ಲಿ ಬಂದ ಅಪರಿಚಿತರು ಮನೆಯನ್ನು
ಜಾಲಾಡಿದ ನಂತರ ಹಣದ ಬಗ್ಗೆ ತಮ್ಮಲ್ಲಿ ಎಲ್ಲಾ ದಾಖಲೆಗಳು ಇರುವುದಾಗಿ ತಿಳಿಸಿ ಒಂದು ವಾರದೊಳಗೆ ಅವರಿಗೆ ಕರೆ ಮಾಡಲಾಗುವುದು ಎಂದು
ಹೇಳಿ ಹೋಗಿರುವುದಾಗಿ ತಿಳಿಸಿರುವ ಪ್ರವೀಣ್ ಮನೆಯಿಂದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದ್ದಾರೆ.
ಸ್ನೇಹಿತರೊಂದಿಗೆ ಈ ಬಗ್ಗೆ ಚರ್ಚಿಸಿ ಸಂಶಯ ಖಚಿತಗೊಂಡ ವೈದ್ಯ ಪ್ರವೀಣ್ ಅವರು, ನವೆÀಂಬರ್ ೧೭ರಂದು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬAಧ ಮೊಕದ್ದಮೆ ದಾಖಲಿಸಿಕೊಂಡು ಕುಶಾಲನಗರ ಪೊಲೀಸ್ ಠಾಣೆ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ಸೂಚನೆಯಂತೆ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಇನ್ಸ್ಪೆಕ್ಟರ್ ಬಿ.ಜಿ. ಪ್ರಕಾಶ್, ಎಸ್ಐ ಗೀತಾ, ಸಂಚಾರಿ ಎಸ್ಐ ಕಾಶೀನಾಥ ಬಗಲಿ ಮತ್ತಿತರರು ಈ ಬಗ್ಗೆ ಸಂಬAಧಿಸಿದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ಸ್ಪಷ್ಟನೆ ಬಯಸಿ ದಾಗ ಇದೊಂದು ನಕಲಿ ಕಾರ್ಯಾ ಚರಣೆ ಎನ್ನುವುದು ಬೆಳಕಿಗೆ ಬಂದಿದೆ.
(ಮೊದಲ ಪುಟದಿಂದ) ಈ ಪೊಲೀಸ್ ಅಧಿಕಾರಿಗಳು, ಅಪರಾಧ ತನಿಖೆ ತಂಡದ ಅಧಿಕಾರಿ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಸ್ಥಳೀಯ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ಆಧರಿಸಿ ಕೊಪ್ಪ ಹೊರವಲಯದ ರೆಸಾರ್ಟ್ ಒಂದಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನವೆಂಬರ್ ೮ರಂದು ರೆಸಾರ್ಟ್ನಲ್ಲಿ ನಕಲಿ ಅಧಿಕಾರಿಗಳು ತಂಗಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆಗಂತುಕರು ರೆಸಾರ್ಟ್ನಲ್ಲಿ ತಮ್ಮ ಆಧಾರ್ ಮತ್ತಿತರ ದಾಖಲೆಗಳನ್ನು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ. ಜಿಲ್ಲೆಯವರನ್ನು ಒಳಗೊಂಡು ಜಿಲ್ಲೆಯ ಹೊರ ಭಾಗದ ವ್ಯಕ್ತಿಯೂ ಸೇರಿದಂತೆ ಈ ನಕಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ಖಚಿತಗೊಂಡ ಬೆನ್ನಲ್ಲೇ ಪೊಲೀಸ್ ತನಿಖೆ ತಂಡ ಜಿಲ್ಲೆಯ ಹಲವೆಡೆ ತನಿಖೆ ನಡೆಸಿದರು. ಆರೋಪಿಗಳು ಪ್ರಕರಣಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.