ವರದಿ: ಈಶಾನ್ವಿ ಕಿರಣ್

ವೀರಾಜಪೇಟೆ, ನ. ೨೩: ಮಲೆನಾಡಾದ ಕೊಡಗಿನಲ್ಲಿ ಕಳೆದ ಹಲವು ದಿನಗಳಿಂದ ಅಕಾಲಿಕ ಮಳೆ ಮುಂದುವರಿದಿದ್ದು, ಕಾಫಿ ಬೆಳೆಗಾರರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ತಿಂಗಳಿನಿAದಲೇ ಅರೆಬಿಕಾ ಕಾಫಿ ಗಿಡಗಳಲ್ಲಿ ಹಣ್ಣಾಗಿದ್ದು, ಅಕಾಲಿಕ ಮಳೆ ಆಗಾಗ್ಗೆ ಸುರಿಯುತ್ತಿರುವುದು ಫಸಲು ಕೊಯ್ಲು ಮಾಡುವುದಕ್ಕೆ ತೊಡಕು ಉಂಟುಮಾಡಿದೆ.

ಕಳೆದ ಜನವರಿಯಲ್ಲಿ ಮಳೆ ಸುರಿದ ಕಾರಣ ಅವಧಿಗೆ ಮುಂಚೆಯೆ ಹೂವು ಬಿಟ್ಟು, ಈ ಬಾರಿ ಹಣ್ಣು ಕೂಡ (ತಿಂಗಳ ಮುಂಚೆಯೆ) ಅತಿ ಬೇಗನೆ ಕೊಯ್ಲಿಗೆ ಬಂದಿದೆ. ಆದರೆ, ಫಸಲು ಕೊಯ್ಲು ಮಾಡುವ ತವಕದಲ್ಲಿರುವ ಬೆಳೆಗಾರರ ಆಸೆಗೆ ಅಕಾಲಿಕ ಮಳೆ ತಣ್ಣೀರೆರಚಿದೆ.

ಫಸಲು ಧರಾಶಾಹಿ : ಇನ್ನೇನು ಮಳೆ ಬಿಡುವು ನೀಡಿ ಬಿಸಿಲಿನ ವಾತಾವರಣ ಬಂತು ಎಂಬ ನಿರೀಕ್ಷೆ ಮಾಡಿದ ಬೆನ್ನ ಹಿಂದೆಯೇ ದಿನಬಿಟ್ಟು ದಿನ ಮಳೆ ಸುರಿಯುತ್ತಲೆ ಇದೆ. ಈ ತರದ ವರುಣನ ಕಣ್ಣಾಮುಚ್ಚಾಲೆ ಆಟ ಕಳೆದ ತಿಂಗಳಿನಿAದಲೂ ಮುಂದುವರಿಯುತ್ತಲೆ ಇದೆ.

ಮಾಡುವುದಕ್ಕೆ ತೊಡಕು ಉಂಟುಮಾಡಿದೆ.

ಗೋಚರಿಸಿದೆ. ಕಾಫಿ ಕೊಯ್ಲು ಮಾಡುವ ಸಮಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆ ಕೈ ಹಿಡಿಯದಂತಾಗಿದ್ದು, ರೈತರು ಕಣ್ಣೀರಿಡುವಂತಾಗಿದೆ.

ಕಳೆದೊಂದು ವಾರದಿಂದ ಮೋಡಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿAದ ಅಲ್ಲಲ್ಲೆ ಸಾಧಾರಣ ಮಳೆಯಾದರೆ, ಕೆಲ ಭಾಗ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ.

ಆಗಾಗ್ಗೆ ಸಾಧಾರಣ ಮಳೆ ಜಿಲ್ಲೆಯ ಜನರನ್ನ ಆತಂಕಕ್ಕೀಡುಮಾಡಿತ್ತು. ಡಿಸೆಂಬರ್ ತಿಂಗಳಲ್ಲಿ ಮಳೆ ಸುರಿಯೋದು ತೀರಾ ವಿರಳ. ಆಗಾಗ್ಗೆ ಮಳೆ ಸುರಿಯುತ್ತಿರೋದು ಜಿಲ್ಲೆಯ ಕಾಫಿ ಬೆಳೆಗಾರರನ್ನ ಕಂಗಾಲಾಗುವAತೆ ಮಾಡಿದೆ. ಈಗಾಗಲೇ ಕಾಫಿ ಹಣ್ಣಾಗಿದ್ದು ಕೊಯ್ಲಿಗೆ ಬಂದಿದೆ. ಈಗ ಕಾಫಿಯನ್ನ ಕೀಳದಿದ್ದರೆ ಉದುರಿ ಹೋಗುತ್ತೆ. ಕಿತ್ತರೆ ಒಣಗಿಸಲು ಬಿಸಿಲಿಲ್ಲ.

ಈಗಾಗಲೇ ಕಾಫಿಯನ್ನ ಕೊಯ್ದಿರೋ ಬೆಳೆಗಾರರು ಕಾಫಿಯನ್ನ ಒಣಗಿಸಲು ಪರದಾಡುವಂತಾಗಿದೆ. ಸ್ವಲ್ಪ ಬಿಸಿಲು ಬಂತೆAದು ಕಾಫಿ ಹಣ್ಣನ್ನ ಅಂಗಳದಲ್ಲಿ ಹರಡಿದರೆ, ನೋಡ-ನೋಡುತ್ತಿದ್ದಂತೆ ಮೋಡ, ತುಂತುರು ಮಳೆ. ಮಳೆಯ ಈ ಕಣ್ಣಾಮುಚ್ಚಲೇ ಆಟ ಬೆಳೆಗಾರರನ್ನ ಹೈರಾಣಾಗಿಸಿದೆ. ಅಲ್ಪಸ್ವಲ್ಪ ಒಣಗಿರೋ ಕಾಫಿ ಈ ಮಳೆಗೆ ನೆಂದರೆ ಕೊಳೆತು ಹೋಗುವ ಭಯ ಬೆಳೆಗಾರರದ್ದು. ಆಗಸ್ಟ್ ತಿಂಗಳ ಮೊದಲ ೧೦ ದಿನ ಸುರಿದ ಮಹಾಮಳೆ-ಗಾಳಿಗೆ ಶೇಕಡ ೪೦ ರಷ್ಟು ಕಾಫಿ ಉದುರಿತ್ತು. ಅಳಿದುಳಿದ ಬೆಳೆಯನ್ನ ಅಲ್ಲಿಂದ ರಕ್ಷಿಸಿಕೊಂಡು ಬಂದಿದ್ದರು. ಈಗ ಕಾಫಿ ಕೀಳಲು ಜನರಿಲ್ಲ. ಹೇಗೋ ಕಷ್ಟಪಟ್ಟು ಕೀಳಿಸಿ ತಂದು ಮನೆ ಮುಂದೆ ಹಾಕಿದರೆ ಒಣಗಿಸಲು ಬಿಸಿಲಿಲ್ಲ. ಜೊತೆಗೆ ಮಳೆ ಬೇರೆ. ಪ್ರಕೃತಿಯ ವೈಚಿತ್ರ÷್ಯಕ್ಕೆ ಬೆಳೆಗಾರರು ಚಿಂತಾಕ್ರಾAತರಾಗಿದ್ದಾರೆ. ನಿನ್ನೆ ಸಂಜೆಯಿAದ ಜಿಲ್ಲಾದ್ಯಂತ ಅಲ್ಲಲ್ಲೇ ತುಸು ಹೆಚ್ಚಾಗೆ ಮಳೆ ಸುರಿದಿದ್ದು ಇದೀಗ, ಕಾಫಿ ಬೆಳೆಗಾರರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.