ಕಣಿವೆ, ನ. ೧೮: ಹಾರಂಗಿ ಜಲಾ ಶಯದ ಅಚ್ಚುಕಟ್ಟು ಪ್ರದೇಶ ಕೂಡಿಗೆಯ ಹೆಗ್ಗಡಹಳ್ಳಿ ಭಾಗದಲ್ಲಿ ಕೃಷಿಕರು ಬೆಳೆದಿದ್ದ ಭತ್ತದ ಫಸಲಿನ ಕಟಾವು ಕಾರ್ಯ ಆರಂಭವಾಗಿದೆ.
ಈ ಬಾರಿ ಸರಿಯಾಗಿ ಮಳೆಯಾ ಗದೆ, ಸಂಗ್ರಹಗೊAಡ ಜಲಾಶಯದ ನೀರನ್ನು ಸಮರ್ಪಕವಾಗಿ ಕಾಲುವೆಗ ಳಲ್ಲಿ ಹರಿಸದಿದ್ದರೂ ಕೈಗೊಂಡ ಭತ್ತದ ಕೃಷಿ ಕೃಷಿಕರ ಕೈ ಹಿಡಿದಂತಿದೆ.
ಹೆಗ್ಗಡಹಳ್ಳಿಯ ಪ್ರಗತಿಪರ ಕೃಷಿಕ ಬಿ.ಎಸ್. ಪ್ರಕಾಶ್ ಹಾಗೂ ಮೀನಾಕ್ಷಿ ದಂಪತಿ ತಾವು ಬೆಳೆದಿದ್ದ ೯೦ ದಿನಗ ಳಲ್ಲಿ ಕಟಾವಿಗೆ ಬರುವ ಸಣ್ಣಮಧು ತಳಿಯ ಭತ್ತದ ಫಸಲನ್ನು ಕಟಾವು ಮಾಡುತ್ತಿದ್ದ ಚಿತ್ರಣ ಕಂಡು ಬಂದಿತು.
ಈ ಸಂದರ್ಭ ಮಾತನಾಡಿದ ಕೃಷಿಕ ದಂಪತಿ ಮೀನಾಕ್ಷಿ ಹಾಗೂ ಪ್ರಕಾಶ್, ಕಳೆದ ಆಗಸ್ಟ್ ೮ ರಂದು ೨೦ ದಿನಗಳ ಅವಧಿಯ ಸಣ್ಣಮಧು ತಳಿಯ ಭತ್ತದ ಸಸಿಮಡಿಗಳನ್ನು ನಾಟಿ ಮಾಡಿದ್ದೆವು. ಇದೀಗ ಕೃಷಿ ಕೂಲಿ ಕಾರ್ಮಿಕರು ಸಿಗದ ಕಾರಣ ನಾವಿಬ್ಬರೇ ಭತ್ತದ ಫಸಲಿನ ಕಟಾವು ಮಾಡುತ್ತಿದ್ದೇವೆ.
ವರ್ಷವಿಡೀ ನಮಗೆ ಮನೆಗೆ ಊಟಕ್ಕೆ ಆಗುವ ಪ್ರಮಾಣದಷ್ಟು ಮಾತ್ರ ಸಣ್ಣ ಮಧು ತಳಿಯ ಭತ್ತ ಬಿತ್ತನೆ ಮಾಡಿದ್ದೆವು. ಉಳಿದಂತೆ ಬೇರೆ ಬೇರೆ ಕೃಷಿಕರು ತಾವು ಬಿತ್ತನೆ ಮಾಡಿದ್ದ ಬೇರೆ ತಳಿಗಳ ಭತ್ತದ ಫಸಲು ನವೆಂಬರ್ ಮಾಸಾಂತ್ಯಕ್ಕೆ ಕಟಾವಿಗೆ ಅಣಿಯಾಗಲಿದೆ ಎಂದು ವಿವರಿಸಿದರು.