ನಾಪೋಕ್ಲು, ನ. ೧೮: ಇಲ್ಲಿಗೆ ಸಮೀಪದ ಮರಂದೋಡ ಗ್ರಾಮದಲ್ಲಿ ರೇಬೀಸ್ ಮುಂಜಾಗ್ರತಾ ಲಸಿಕೆ ನೀಡುವ ಕಾರ್ಯಕ್ರಮವನ್ನು ಮರಂದೋಡ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯರಾದ ಚೋಯಮಾಡಂಡ ಹರಿ ಮೊಣ್ಣಪ್ಪ ಹೂವಿನ ಕುಂಡಕ್ಕೆ ನೀರು ಹಾಕುವುದರೊಂದಿಗೆ ಉದ್ಘಾಟಿಸಿದರು.

ನಾಪೋಕ್ಲು ಪಶು ವೈದ್ಯಾಧಿಕಾರಿ ಡಾ| ಶಿಲ್ಪಾಶ್ರೀ ಅವರ ಮಾರ್ಗದರ್ಶನದಲ್ಲಿ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಸುನಿಲ್ ಮತ್ತು ಕಕ್ಕಬ್ಬೆ ಪಶುಸಖಿ ಸುಧಾ ಅವರುಗಳು ೬೦ ಸಾಕು ನಾಯಿಗಳಿಗೆ ರೇಬೀಸ್ ಮುಂಜಾಗ್ರತಾ ಲಸಿಕೆ ನೀಡಿದರು.