ಶನಿವಾರಸಂತೆ, ನ. ೧೮: ಪಟ್ಟಣದ ರೋಟರಿ ಸಂಸ್ಥೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ೭ನೇ ವರ್ಷದ ಉಚಿತ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ನಾಯಿ ಹುಚ್ಚು (ರೇಬಿಸ್) ನಿಯಂತ್ರಣಾ ಲಸಿಕೆ ಶಿಬಿರವನ್ನು ತಾ.೨೦ ರಂದು ಗುಡುಗಳಲೆ ಜಾತ್ರಾ ಮೈದಾನದಲ್ಲಿ ಆಯೋಜಿಸಲಾ ಗಿದೆ. ರೋಟರಿ ಸಂಸ್ಥೆ ಅಧ್ಯಕ್ಷ ಎ.ಎಚ್. ಚಂದ್ರಕಾAತ್ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಲಿದ್ದು, ರಾಜ್ಯಪಾಲ ಎಚ್.ಆರ್. ಕೇಶವ್ ಉದ್ಘಾಟಿಸಲಿದ್ದಾರೆ.

ತಾಲೂಕು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಸ್.ವಿ. ಬದಾಮಿ ರೇಬೀಸ್ ರೋಗ ಕುರಿತು ಉಪನ್ಯಾಸ ನೀಡುತ್ತಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಎಂ. ಸತೀಶ್ ಕುಮಾರ್ ಹಾಗೂ ಸೋಮವಾರಪೇಟೆ ಪಶು ಚಿಕಿತ್ಸಾಲಯ ಪಶು ವೈದ್ಯ ಡಾ.ಕೆ.ಎಂ. ಮಾಲತೇಶ್, ಸಿಬ್ಬಂದಿ ಉಪಸ್ಥಿತರಿರುತ್ತಾರೆ.