ಕೂಡಿಗೆ, ನ. ೧೭: ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಧಾರ್ಮಿಕ ಪೂಜಾ ವಿಧಿವಿಧಾನ, ಹೋಮ ಹವನಗಳು, ಕಳಶಾಭಿಷೇಕ ನೆರವೇರಿದವು. ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅರೆಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಜೀವನದಲ್ಲಿ ಆಸ್ತಿ, ಅಂತಸ್ತು, ಆಯಸ್ಸು ಶಾಶ್ವತವಲ್ಲ. ಇಸನ್ನಡತೆ, ಸದ್ವಿಚಾರ, ಸಾರ್ಥಕ ಸೇವೆಗಳ ಮೂಲಕ ಭಗವಂತನ ಅನುಗ್ರಹ ಪಡೆದುಕೊಳ್ಳಲು ಸಾಧ್ಯ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಅಂತರAಗದಲ್ಲಿ ಆಸ್ತಿಕ ಭಾವನೆ ಕಾಣಲು ಸಾಧ್ಯ. ಅಧ್ಯಾತ್ಮಿಕ ಪರಂಪರೆಯ ಶಕ್ತಿಯೇ ಅಂತಹದ್ದು. ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆ ಮನುಷ್ಯನ ಬಾಹ್ಯ ಬದಲಾವಣೆಗೆ ಪೂರಕವಾದರೆ ಅಂತರAಗದ ಪರಿಷ್ಕರಣೆಗೆ, ಶಾಂತಿ, ನೆಮ್ಮದಿ, ಸೌಹಾರ್ದತೆಗೆ ಅಧ್ಯಾತ್ಮ ಅಗತ್ಯವಿದೆ ಎಂದರು.
ಬಸವೇಶ್ವರ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್ ಸೇರಿದಂತೆ ದೇವಾಲಯ ಜೀರ್ಣೋದ್ಧಾರಕ್ಕೆ ಸಹಕರಿಸಿ, ಸಲಹೆ ನೀಡಿ ಕೊಡುಗೆ ನೀಡಿದ ಪ್ರಮುಖ ದಾನಿಗಳನ್ನು, ಪೂಜಾ ವಿಧಿ ನೆರವೇರಿಸಿದ ಶಾಸ್ತಿçಗಳ ತಂಡವನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ದೇವಾಲಯ ಭೇಟಿ ನೀಡಿ ದೇವರ ದರ್ಶನ ಪಡೆದರು. ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮಿ, ವೀರಾಜಪೇಟೆ ಆತ್ಮಾನಂದ ಪುರಿ ಸ್ವಾಮಿ, ಅರೆಮಾದನಹಳ್ಳಿ ಪರಮಪೂಜ್ಯ ಶಿವ ಸುಜ್ಞಾನ ತೀರ್ಥ ಸ್ವಾಮಿ ಆರ್ಶೀವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿಯ ಅಧ್ಯಕ್ಷ ಬಸವರಾಜ್ ವಹಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಉದ್ಯಮಿ ಹೆಚ್. ಆರ್. ದಿನೇಶ್, ಹೆಚ್. ಎಲ್ ರಾಮಪ್ಪ, ಹೆಚ್. ವಿ. ಶಿವಪ್ಪ, ಕೆ.ಪಿ.ಸಿ.ಸಿ. ಸದಸ್ಯ ಮಂಜುನಾಥ ಗುಂಡೂರಾವ್, ಕಾಂಗ್ರೆಸ್ ಮುಖಂಡ ಹೆಚ್.ಕೆ. ನಟೇಶ್ ಗೌಡ, ಶ್ರೀನಿವಾಸ, ರಾಜಶೇಖರ, ಸೇರಿದಂತೆ ಹಲವಾರು ಗಣ್ಯರು, ದಾನಿಗಳು ಉಪಸ್ಥಿತರಿದ್ದರು.
ನೂತನವಾಗಿ ನಿರ್ಮಿಸಲಾದ ಬಸವೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನೆ, ಕಳಶರೋಹಣ, ಮಹಾರುದ್ರಾಭಿಷೇಕ, ರುದ್ರ ಪಾರಾಯಣ, ಗೋಪುರಕಳಶ ಪ್ರತಿ ಷ್ಠಾಪನೆ, ಕುಂಭಾಭಿಷೇಕ ಸೇರಿದಂತೆ ವಿವಿಧ ಹೋಮಹವನ ಪೂಜಾ ಕೈಂಕರ್ಯಗಳು ಎರಡು ದಿನಗಳವರೆಗೆ ಕಿರಣ್ ಶಾಸ್ತಿç ಅವರ ನೇತೃತ್ವದ ತಂಡದವರಿAದ ನೆರವೇರಿತು.